ಹುಬ್ಬಳ್ಳಿ: ಬ್ಯಾಂಕ ನಲ್ಲಿ ದರೋಡೆ ಮಾಡಿದ ಚಿನ್ನವನ್ನು ಶಾಲೆಯಲ್ಲಿ ಬಚ್ಚಿಟ್ಟಿದ್ದ ದರೋಡೆಕೋರರು
ವಿಜಯಪುರದ ಕೆನರಾ ಬ್ಯಾಂಕ್ ದರೋಡೆ ಪ್ರಕರಣ ಸಂಬಂಧಿಸಿದಂತೆ ದರೋಡೆ ಮಾಡಿದ ಚಿನ್ನವನ್ನು ಹುಬ್ಬಳ್ಳಿ ಖಾಸಗಿ ಶಾಲೆಯಲ್ಲಿ ದರೋಡೆ ಕೋರರು ಬಚ್ಚಿಟ್ಟಿ ಜಾಗವನ್ನು ಇಂದು ಸ್ಥಳ ಮಹಜರು ಮಾಡಲಾಯಿತು.
ಕಳ್ಳತನ ಪ್ರಮುಖ ಆರೋಪಿ ಶೇಖರ ನನ್ನ ಹುಬ್ಬಳ್ಳಿಗೆ ಕರೆತಂದ ಪೊಲೀಸರು ಹುಬ್ಬಳ್ಳಿಯ ವಿವಿಧ ಕಡೆ ಸ್ಥಳ ಮಹಜರು ಮಾಡಿದರು.
ಸ್ಥಳ ಮಹಜರು ಜೊತೆಗೆ ಚಿನ್ನ ಕರಗಿಸಲು ಬಳಸಿದ ಕೆಲವು ವಸ್ತುಗಳನ್ನ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಕೇಶ್ವಾಪುರದಲ್ಲಿರುವ ಮನೆ ಹಾಗೂ ಗದಗ ರಸ್ತೆಯಲ್ಲಿನ ಖಾಸಗಿ ಶಾಲೆಯಲ್ಲಿಯೇ ಚಿನ್ನ ಬಚ್ಚಿಟ್ಟಿದ್ದ ಜಾಗವನ್ನು ಮಹಜರು ಮಾಡಲಾಯಿತು.