ಧಾರವಾಡ ನೆಹರು ನಗರದ ಕೊಳಚೆ ಪ್ರದೇಶದ 121 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ.. ಹಕ್ಕುಪತ್ರ ಫಲಾನುಭವಿಗಳಿಗೆ ಹಸ್ತಾಂತರಿಸಿದ ವಿಪಕ್ಷ ಉಪನಾಯಕ ಬೆಲ್ಲದ.
ವಾಸಸ್ಥಳದ ಹಕ್ಕುಪತ್ರ ಇಲ್ಲದೇ ಆತಂಕದಲ್ಲಿಯೇ ದಿನಗಳನ್ನು ದುಡಿಕೊಳ್ಳುತ್ತಾ ಬದುಕುತ್ತಿದ್ದ ಕೊಳಚೆ ಪ್ರದೇಶದ 121 ನಿವಾಸಿಗಳಿಗೆ ಕೊನೆಗೂ ಹಕ್ಕುಪತ್ರ ಹಸ್ತಾಂತರ ಮಾಡುವ ಮೂಲಕ ಕ್ಷೇತ್ರದ ಶಾಸಕ ಹಾಗೂ ವಿಧಾನ ಸಭೆಯ ವಿಪಕ್ಷ ಉಪನಾಯಕರಾದ ಅರವಿಂದ ಬೆಲ್ಲದವರು ನಿವಾಸಿಗಳ ಆತಂಕ ದೂರು ಮಾಡಿದ್ದಾರೆ.
ಹೌದು ವಾಸಸ್ಥಳದಿಂದ ಯಾವಗ ಯಾರು ನಮ್ಮನ್ನು ಜಾಗಾ ತೊರೆಯುವಂತೆ ಹೇಳುತ್ತಾರೆ ಎಂಬ ಅತಂಕದಲ್ಲಿಯೇ ದಿನಗಳನ್ನು ದೂಡುತ್ತಿದ್ದ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ 10 ವಾರ್ಡನ್ ನೆಹರು ನಗರ ಕೊಳಚೆ ಪ್ರದೇಶದ 121 ಕುಟುಂಬಗಳಿಗೆ ಕ್ಷೇತ್ರಕ್ಕೆ ಶಾಸಕರಾದ ಅರವಿಂದ ಬೆಲ್ಲದವರು ಕುಟುಂಬಸ್ಥರಿಗೆ ಹಕ್ಕುಪತ್ರಗಳನ್ನು ತಮ್ಮ ನಿವಾಸದಲ್ಲಿ ಹಸ್ತಾಂತರ ಮಾಡಿದರು.
ಇನ್ನೂ ಹಕ್ಕು ಪತ್ರ ಪಡೆದುಕೊಂಡ ಕುಟುಂಬಗಳು ಶಾಸಕರ ಸ್ಪಂದನೆಗೆ ಮೆಚ್ಚಿಕೊಂಡರು. ಹಲವು ವರ್ಷಗಳಿಂದ ಕೊಳಚೆ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಈ ಕುಟುಂಬಗಳಿಗೆ ಹಕ್ಕಪತ್ರ ಇರಲಿಲ್ಲ.
ಈಗ ಅದೂ ಕುಟುಂಬಗಳ ಕೈ ಸೇರುತ್ತಿದಂತೆ ನಿವಾಸಿಗಳ ಸಂತಸ ಹೆಚ್ಚಿಸಿದೆ. ಇನ್ನೂ ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಮಂಜುನಾಥ ಮಲ್ಲಿಗವಾಡ, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಬಸವರಾಜ್ ಗರಗ, ಸ್ಥಳೀಯ ಮುಖಂಡರಾದ ರುದ್ರಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.