ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.
ನಂದಿಹಳ್ಳಿ ಗ್ರಾಮ ವ್ಯಾಪ್ತಿ ವಾಕಡೆವಾಡಿ ರಸ್ತೆಯಲ್ಲಿರುವ ರವಿ ತೋಪಕರ ಎಂಬುವವರ ಜಮೀನಿನಲ್ಲಿ ಕೆಲವರು ಇಸ್ಪೀಟ್ ಎಲೆಗಳ ಮೇಲೆ ಹಣ ಕಟ್ಟಿ ಅಂದರ್-
ಬಾಹರ್ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್ ಐ ಸಂತೋಷ ದಳವಾಯಿ ನೇತೃತ್ವದ ತಂಡ ದಾಳಿ ನಡೆಸಿದ್ದು, 12 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಗೋವಿಂದ ಪರಶುರಾಮ ಚೌಗುಲೆ, ಸೂರಜ ಮಸನು ತೋಪಕರ, ಮಾರುತಿ ಪಾಂಡು ಸುತಾರ, ಭರತ್ ಸುಧಾಕರ ಪಾಟೀಲ, ಶಿವಾಜಿ ಪಾಂಡು ಸುತಾರ, ಸಂತೋಷ ಅಶೋಕ ಸುತಾರ, ಯಲ್ಲಪ್ಪಾ ಪರಶುರಾಮ ರಾಘೋಜಿ, ಜ್ಯೋತಿಬಾ ಮೋನಪ್ಪಾ ತೋಪಕರ, ಸಾತೇರಿ ಪರಶುರಾಮ ಸುತಾರ, ಕಿರಣ ಲಕ್ಷ್ಮಣ ತಳವಾರ, ಪರಶುರಾಮ ಪಾಂಡು ಸುತಾರ, ಕಲ್ಲಪ್ಪಾ ನಾಗೇಂದ್ರ ತೋಪಕರ ಎಂದು ಗುರುತಿಸಲಾಗಿದೆ.ಬಂಧಿತರಿಂದ ಒಟ್ಟು 15,090 ರೂ. ಹಣ, ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7