ಬೆಂಗಳೂರು, (ಜೂನ್ 29): ಯುವತಿಯೋರ್ವಳು ತನ್ನ ಮನೆಯಲ್ಲಿದ್ದ ಸಾಕು ನಾಯಿಯನ್ನು (pet dog) ಕೊಂದು ಅದರ ಜೊತೆ ನಾಲ್ಕು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಮಹದೇವಪುರದ ದೊಡ್ಡನಕ್ಕುಂದಿಯ ಅಕ್ಮೆ ಬಾಲ್ಲೇಟ್ ಅಪಾರ್ಟ್‌ಮೆಂಟ್ ನಿವಾಸಿ ತ್ರಿಪರ್ಣಾ ಪಾಯಿಕ್ ಮೇಲೆ ಈ ಆರೋಪ ಬಂದಿದ್ದು, ಆಕೆಯ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ಸಹಿಸಲಾರದೆ ಬಿಬಿಎಂಪಿ ಪಶುಸಂಗೋಪಾನಾ ಇಲಾಖೆಗೆ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದರು.
ಈ ಅದರನ್ವಯ ಅಧಿಕಾರಿಗಳು ಆಕೆ ಫ್ಲ್ಯಾಟ್‌ನಲ್ಲಿ ಪರಿಶೀಲನೆ ಮಾಡಿದಾಗ ನಾಯಿ ಮೃತದೇಹ ಪತ್ತೆಯಾಗಿದೆ.ಮಹದೇವಪುರದ AKME ballet apartment ಅಸೋಸಿಯೇಷನ್ 404 ಫ್ಲ್ಯಾಟ್ ನಲ್ಲಿ ಲ್ಲಿ ಮಾಲಕಿ ತ್ರಿಪರ್ಣಾ ಎಂಬಾಕೆ ನಾಯಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದು, ಮನೆಯಲ್ಲಿ ಮೃತದೇಹದ ಗುಬ್ಬು ವಾಸನೆ ಮಧ್ಯೆಯೇ ವಾಸ ಮಾಡಿದ್ದಾಳೆ. ವಾಸನೆಯಿಂದ ಕಂಗೆಟ್ಟ ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಪಶುಸಂಗೋಪಾನಾ ಸಹಾಯಕ ನಿರ್ದೇಶಕರು ಮತ್ತು ಪ್ರಾಣಿ ಪ್ರಿಯರು, ತ್ರಿಪರ್ಣಾ ಮನೆ ಒಳಗಡೆ ಹೋಗುತ್ತಿದ್ದಂತೆ ಶಾಕ್ ಆಗಿದ್ದಾರೆ. ಮನೆಯಲ್ಲಿ ಊಟ ಇಲ್ಲದೇ 2 ಶ್ವಾನಗಳು ಬಳಲಿದ್ರೆ, ಮತ್ತೊಂದು ಶ್ವಾನ ಜೀವಬಿಟ್ಟು ಗೊಬ್ಬು ನಾರುತ್ತಿತ್ತು.
Laxmi News 24×7