Breaking News

ಮೊಹರಂ ಹಬ್ಬ‌ ಸಮೀಪ ಹಿನ್ನಲೆ, ಧಾರವಾಡದಲ್ಲಿ ಮೂರ್ತಿ ಪ್ರತಿಷ್ಠಾನ ಮುಖಂಡರ ಸಭೆ

Spread the love

ಮೊಹರಂ ಹಬ್ಬ‌ ಸಮೀಪ ಹಿನ್ನಲೆ, ಧಾರವಾಡದಲ್ಲಿ ಮೂರ್ತಿ ಪ್ರತಿಷ್ಠಾನ ಮುಖಂಡರ ಸಭೆ…. ಪೊಲೀಸ್ ಇಲಾಖೆಗೆ ಅಗತ್ಯ ಮಾಹಿತಿ ನೀಡಿ ಅನುಮತಿ ಪಡೆಯಲು ಸೂಚನೆ
ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವೆಂದೇ ಕರೆಯಲ್ಪಡುವ ಮೊಹರಂ ಹಬ್ಬವನ್ನು ಪೆಢಾ ನಗರಿ ಧಾರವಾಡದಲ್ಲಿ ಶಾಂತಿ ಸುವ್ಯವಸ್ಥಿತವಾಗಿಯಿಂದ ನಡೆಸುವ ದೃಷ್ಟಿಯ ಹಿನ್ನೆಲೆಯಲ್ಲಿ, ಶುಕ್ರವಾರ ಸಂಜೆ ಧಾರವಾಡದಲ್ಲಿ ಮೂರ್ತಿ ಪ್ರತಿಷ್ಠಾನ‌ ಮುಖರೊಂದಿಗೆ ಪೊಲೀಸ್ ಇಲಾಖೆಯ ವತಿಯಿಂದ ಸಭೆ ನಡೆಸಿ ಮೂರ್ತಿ ಪ್ರತಿಷ್ಠಾನಕಾರರಿಗೆ ಹಲವು ಸೂಚನೆಗಳನ್ನು ನೀಡಲಾಯಿತು.
ನಗರದ ಧಾರವಾಡ ಎಸಿಪಿ ಕಚೇರಿಯಲ್ಲಿ ಎಸಿಪಿ ಪ್ರಶಾಂತ್ ಸಿದ್ಧನಗೌಡರ ನೇತೃತ್ವದಲ್ಲಿ ಮೊಹರಂ ಮೂರ್ತಿ ಪ್ರತಿಷ್ಠಾನ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಧಾರವಾಡ ನಗರದ ಶಹರ, ಸಬ್ ಅರ್ಬನ್ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿನ ಮೊಹರಂ ಮೂರ್ತಿ ಪ್ರತಿಷ್ಠಾನ ಮುಖಂಡರು ಭಾಗವಹಿಸಿ ಆಚರಣೆಗಳ ವಿವರಗಳನ್ನು ನೀಡಿದರು. ಈ ಎಲ್ಲ ವಿಷಯಗಳನ್ನು ಆಲಿಸಿದ ಧಾರವಾಡ ಎಸಿಪಿಯವರು, ಮುಖಂಡರಿಗೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹಬ್ಬ ಆಚರಣೆಗೆ ಸೂಚಿಸಿದರು.
ಅಲ್ಲದೆ ಮೂರ್ತಿ ಪ್ರತಿಷ್ಠಾನ ಮಾಡುವ ಮುಖಂಡರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು.
ಜತೆಗೆ ಠಾಣಾ ವ್ಯಾಪ್ತಿಯಲ್ಲಿ ಅಗತ್ಯ ಅನುಮತಿ ಪಡೆದುಕೊಂಡು ಯಾವುದೇ ಅಹಿತಕರ ಘಟನೆಗೆ ಅವಾಕಾಶ ನೀಡಿದಂತೆ ಎಚ್ಚರಿಕೆಯಿಂದ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಎಸಿಪಿಯವರು ಮುಖಂಡರಿಗೆ ಸೂಚನೆ ನೀಡಿದರು. ಒಂದುವೇಳೆ ಏನಾದರೂ ಅಹಿತಕರ ಘಟನೆ ನಡೆದಲ್ಲಿ ಸ್ಥಳೀಯ ಮುಖಂಡರು ಅದರ ಕುರಿತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಈ ವೇಳೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಸಂದರ್ಭದಲ್ಲಿ ಮೂರು ಪೊಲೀಸ್‌ ಠಾಣೆಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಹಿರಿಯ ಮುಖಂಡರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ ನಿರ್ಮಾಣ”

Spread the love“ಅಂಬೇಡ್ಕರ ಜಿ ಅವರು ನಿಪ್ಪಾಣಿಗೆ ಭೇಟಿ ನೀಡಿದ ಹಿನ್ನಲೆ,ದೇಶದಲ್ಲೇ ಗಮನ ಸೆಳೆಯುವಂತಹ ಅಂಬೇಡ್ಕರ ಮ್ಯೂಸಿಯಂ ಪ್ರವಾಸಿ ತಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ