ದಾವಣಗೆರೆ: ನಗರದಲ್ಲಿರುವ ಏಕೈಕ ಪಾಲಿಕ್ಲಿನಿಕ್ ಇಡೀ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕ್ ಜಾನುವಾರುಗಳು ಹಾಗೂ ಪ್ರಾಣಿಗಳ ಜೀವ ಉಳಿಸಲು ಶ್ರಮಿಸುತ್ತಿದೆ.
ಇಲ್ಲಿ ನೂರಾರು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ಸಿ ಸೆಕ್ಷನ್‌ಗೂ ಈ ಆಸ್ಪತ್ರೆ ಹೆಸರುವಾಸಿ. ಇಲ್ಲಿನ ಕರುಣಾಮಯಿ ಸರ್ಜನ್ಗಳು ಆಪರೇಷನ್‌ಗಳನ್ನು ಮಾಡಿ ಇಂದಿಗೂ ಸಾವಿರಾರು ಮೂಕಜೀವಿಗಳ ಪ್ರಾಣ ಉಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಪ್ರಾಣಿಗಳು, ಜಾನುವಾರುಗಳನ್ನು ಹಿಡಿದು ಚಿಕಿತ್ಸೆ ಅರಸಿ ಮಾಲೀಕರು ಈ ಪಾಲಿಕ್ಲಿನಿಕ್ಗೆ ಬರುತ್ತಾರೆ. ಇಡೀ ಜಿಲ್ಲೆಯಲ್ಲಿ ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿಕ್ಲಿನಿಕ್ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ.
ಆಸ್ಪತ್ರೆಯಲ್ಲಿವೆ ಸುಸಜ್ಜಿತ ಉಪಕರಣಗಳು: ನಗರದ ಅರುಣ್ ವೃತ್ತದಲ್ಲಿರುವ ಪಾಲಿಕ್ಲಿನಿಕ್ ಪ್ರಮುಖ ಶಿಫಾರಸ್ಸು ಪಶು ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿರುವ ಪಶು ಆಸ್ಪತ್ರೆಗಳಲ್ಲಿ ಸೇವೆ ಸಿಗದೆ ಇದ್ದಾಗ ಈ ಪಾಲಿಕ್ಲಿನಿಕ್ಗೆ ಶಿಫಾರಸು ಮಾಡಲಾಗುತ್ತದೆ.
Laxmi News 24×7