Breaking News

ತಾನು ಕೆಲಸ ನಿರ್ವಹಿಸಿದ್ದ ಬ್ಯಾಂಕ್​​ನಲ್ಲೇ ನಿವೃತ್ತ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣು

Spread the love

ತಾನು ಕೆಲಸ ನಿರ್ವಹಿಸಿದ್ದ ಬ್ಯಾಂಕ್​​ನಲ್ಲೇ ನಿವೃತ್ತ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣು

ಮಂಗಳೂರು (ದಕ್ಷಿಣ ಕನ್ನಡ) : ನಿವೃತ್ತರಾದ ಬ್ಯಾಂಕ್ ಉದ್ಯೋಗಿಯೊಬ್ಬರು ತಾನು ಕರ್ತವ್ಯ ನಿರ್ವಹಿಸಿದ್ದ ಬ್ಯಾಂಕ್ ನಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಕೊಡಿಯಾಲ್ ಬೈಲ್​ನಲ್ಲಿರುವ ಕೆನರಾ ಬ್ಯಾಂಕ್​​ನಲ್ಲಿ ನಡೆದಿದೆ.

ಮೃತರನ್ನು ಅಳಕೆ ನಿವಾಸಿ ಗಿರಿಧರ್ ಯಾದವ್ (61) ಎಂದು ಗುರುತಿಸಲಾಗಿದೆ. ಇವರು ಕೊಡಿಯಾಲ್ ಬೈಲ್ ಕೆನರಾ ಬ್ಯಾಂಕ್​​ನಲ್ಲಿ ಸುಮಾರು 40 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಇವರು ನಿವೃತ್ತಿ ಹೊಂದಿದ್ದರು. ಆದರೂ ಬ್ಯಾಂಕ್​​ನ ಮೇಲಿನ ಪ್ರೀತಿಗೆ ಬ್ಯಾಂಕ್​​ಗೆ ಬಂದು ಹೋಗುತ್ತಿದ್ದರು. ಅದೇ ರೀತಿ ನಿನ್ನೆ ಬ್ಯಾಂಕ್​​ಗೆ ಬಂದವರು ಮತ್ತೆ ಮನೆಗೆ ಹಿಂದಿರುಗಿರಲಿಲ್ಲ. ಈ ಹಿನ್ನೆಲೆ ಗಿರಿಧರ್ ಅವರ ಪತ್ನಿ ಬಂದರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕುರಿತಂತೆ ದೂರು ದಾಖಲಿಸಿದ್ದರು.

ಇಂದು ಬೆಳಗ್ಗೆ ಬ್ಯಾಂಕ್ ಬಾಗಿಲು ತೆರೆದಾಗ ಬ್ಯಾಂಕ್​​ನ ಸ್ಟೋರ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಗಿರಿಧರ್ ಅವರು ಕಂಡು ಬಂದಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಗಿರಿಧರ್ ಯಾದವ್ ಅವರು ರಾಜ್ಯಮಟ್ಟದ ಪವರ್ ಲಿಪ್ಟರ್ ಆಗಿದ್ದು, ಹಲವಾರು ಪದಕಗಳನ್ನು ಗಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ