Breaking News

ಶರಾವತಿ ಮುಳುಗಡೆ ಸಂತ್ರಸ್ತರ ಬಹುದಿನದ ಬೇಡಿಕೆ ಶರಾವತಿ ಹಿನ್ನೀರಿನ ಸೇತುವೆ ಕಾಮಗಾರಿ ಮುಕ್ತಾಯ

Spread the love

ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರ ಬಹುದಿನದ ಬೇಡಿಕೆ ಶರಾವತಿ ಹಿನ್ನೀರಿನ ಸೇತುವೆ ಕಾಮಗಾರಿ ಮುಕ್ತಾಯವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ‌ ಲೋಕಾರ್ಪಣೆ ಆಗಲಿದೆ.

ಈ ನಡುವೆ ಸೇತುವೆ ಕಾಮಗಾರಿ ಮುಕ್ತಾಯವಾಗಿದ್ದು, ಸೇತುವೆಯನ್ನು ಡ್ರೋನ್ ಕ್ಯಾಮೆರಾದಲ್ಲಿ‌ ಸೆರೆ ಹಿಡಿಯಲಾಗಿದೆ.

ಸಿಗಂದೂರು ಭಾಗದಿಂದ ಸೇತುವೆಯ ಸುಂದರ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಡ್ರೋನ್​ ಸೇತುವೆಯ ನಡುವೆ ಬರುತ್ತಿದ್ದರೆ, ನೋಡುಗರನ್ನು ಹೊಸ‌ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ನೀರಿನ ನಡುವೆ ಸೇತುವೆ ನೋಡುವುದೇ ಚಂದ ಎಂಬಂತೆ ಇದು ಕಾಣುತ್ತದೆ. ಹ್ಯಾಂಗಿಂಗ್ ಕೇಬಲ್ ಕಮಾನಿನ ನಡುವೆ ಸೇತುವೆ ನೋಡುವುದು ಅದ್ಬುತ ಎಂಬಂತೆ ಕಾಣುತ್ತದೆ.

ಇದರಿಂದ ಬ್ರಿಡ್ಜ್ ಸುಂದರ ದೃಶ್ಯ ಕಣ್ತುಂಬ್ಬಿ‌ಕೊಂಡಂತೆ ಆಗುತ್ತದೆ.ಟೆಸ್ಟ್​​ನಲ್ಲಿ‌ ಪಾಸಾದ ಬ್ರಿಡ್ಜ್ : ಸಿಗಂದೂರು‌ ಸೇತುವೆಯ ಕಾಮಗಾರಿ‌ ಮುಕ್ತಾಯವಾಗಿದೆ. ಬ್ರಿಡ್ಜ್​​​ಗೆ ಸುಣ್ಣ ಬಣ್ಣ ಹಚ್ಚಲಾಗಿದೆ. ಆದರೆ,

ಇದು ಭಾರವನ್ನು‌ ಹೇಗೆ ತಡೆದುಕೊಳ್ಳುತ್ತದೆ ಎಂಬುದನ್ನು ತಿಳಿಯಲು ತಂತ್ರಜ್ಞರು ಪರೀಕ್ಷೆಗೆ ಒಳಪಡಿಸಿದ್ದಾರೆ. ಬ್ರಿಡ್ಜ್‌ಗೆ ಮೊದಲು‌ 25 ಟನ್ ಭಾರ ಹಾಕಲಾಗಿದೆ.‌ ನಂತರ 25 ಟನ್ ಹೀಗೆ ಸುಮಾರು 100 ಟನ್‌ಭಾರವನ್ನು‌ ಸೇತುವೆಯ ಎಲ್ಲಾ‌ ಭಾಗದಲ್ಲಿ ಹಾಕಿ ಪರೀಕ್ಷಿಸಲಾಗಿದೆ. ಇದರಲ್ಲಿ ಬ್ರಿಡ್ಜ್ ಸಂಪೂರ್ಣವಾಗಿ‌ ಪಾಸಾಗಿದೆ. ಮುಂದಿನ ವಾರ ಇನ್ನೊಂದು ಪರೀಕ್ಷೆ ಇದೆ. ಇದರಲ್ಲಿ‌ ಪಾಸಾದರೆ ಬ್ರಿಡ್ಜ್ ಓಪನ್ ಡೇಟ್ ಫಿಕ್ಸ್ ಆಗಲಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ