Breaking News

3 ತಿಂಗಳಿನಿಂದ ಹಣ ಬಾರದೇ ಗೃಹಲಕ್ಷ್ಮೀಯರು ಕಂಗಾಲು

Spread the love

ಹುಬ್ಬಳ್ಳಿ, (ಜೂನ್ 26): ರಾಜ್ಯದಲ್ಲಿ ತಾವು ಅಧಿಕಾರಕ್ಕೆ ಬಂದ್ರೆ ಪ್ರತಿಯೊಬ್ಬ ಗೃಹಲಕ್ಷ್ಮಿಯರಿಗೆ ಎರಡು ಸಾವಿರ ಹಣ ನೀಡುವುದಾಗಿ ಕಾಂಗ್ರೆಸ್ (Congress) ನಾಯಕರು ಹೇಳಿದ್ದರು. ಅದರಂತೆ ಅಧಿಕಾರಕ್ಕೆ ಬಂದಮೇಲೆ 2023 ರ ಜುಲೈ ತಿಂಗಳಿಂದ ಈ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Guarantee Scheme )ಕಾಂಗ್ರೆಸ್ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಸರಿಸುಮಾರು 1.25 ಕೋಟಿ ಗೃಹಣಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಈ ಯೋಜನೆಗಾಗಿಯೇ ಕಳೆದ ಬಜೆಟ್ ನಲ್ಲಿ ಸರ್ಕಾರ ಬಜೆಟ್ ನಲ್ಲಿ 28608 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಆದ್ರೆ ಗೃಹಲಕ್ಷ್ಮಿ ಹಣ ಸರಿಯಾಗಿ ಪ್ರತಿ ತಿಂಗಳು ಖಾತೆಗೆ ಜಮೆಯಾಗದಿರುವುದರಿಂದ ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗೃಹಲಕ್ಷ್ಮಿ ಹಣದ ವಿಚಾರವಾಗಿ ವಿರೋಧ ಪಕ್ಷಗಳು ಆಗಾಗ ಸರ್ಕಾರದ ವಿರುದ್ದ ಹರಿಹಾಯುತ್ತಲೇ ಇವೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ ಎಂದು ಆರೋಪಿಸುತ್ತಿವೆ. ಸರ್ಕಾರ ಕೂಡಾ ಸರಿಯಾಗಿ ಹಣ ಹಾಕುತ್ತೇವೆ ಎಂದು ಹೇಳುತ್ತಲೇ ಇದೆ. ಆದ್ರೆ ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮಿಯರಿಗೆ ಹಣ ಬಂದಿಲ್ಲವಂತೆ. ಪ್ರತಿ ತಿಂಗಳು ಹಣ ಜಮೆಯಾಗದಿರುವುದಕ್ಕೆ ಹುಬ್ಬಳ್ಳಿಯಲ್ಲಿ ಫಲಾನುಭವಿಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿಂದೆ ಸರ್ಕಾರ ಪ್ರತಿ ತಿಂಗಳು ಹಣ ಹಾಕುವುದಾಗಿ ಹೇಳಿತ್ತು. ಆದ್ರೆ ಕಳೆದ ಮೂರು ತಿಂಗಳಿಂದ ನಮ್ಮ ಅಕೌಂಟ್ ಗೆ ಹಣ ಬಂದಿಲ್ಲ. ಹಣ ಬಂದಿದೆ ಎಂದು ಬ್ಯಾಂಕ್ ಗೆ ಹೋಗಿ ಬರುತ್ತಿದ್ದೇವೆ. ಆದ್ರೆ ಬ್ಯಾಂಕ್ ನವರು ಯಾವುದೇ ಹಣ ಜಮೆಯಾಗಿಲ ಎಂದು ಹೇಳುತ್ತಿದ್ದಾರೆ


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ