41ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ
ಬೆಳಗಾವಿಯ ಫೋಟ್ಟಿ ವನ್ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅತ್ಯಂತ ಉತ್ಸಾಹದಲ್ಲಿ ನಡೆಯಿತು.
ಬೆಳಗಾವಿಯ ಫೋಟ್ಟಿ ವನ್ನರ್ಸ್ ಕ್ಲಬ್’ ಮತ್ತು ಬೆಲಗಾಮ್ ಚಾಲೆಂಜರ್ಸ್ ಟ್ಯಾಜೆಂಟ್-38 ಕ್ಲಬ್’ಗಳು ತಮ್ಮ ಸಕ್ರಿಯ ಸಹಭಾಗಿತ್ವದೊಂದಿಗೆ ರಕ್ತದಾನ, ಶಾಲೆಗಳಿಗೆ ಮೂಲಸೌಕರ್ಯ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ಆರೋಗ್ಯ ತಪಾಸಣೆಯಂತಹ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದು, ಬುಧವಾರದಂದು ಬೆಳಗಾವಿಯಲ್ಲಿ ಫೋಟ್ಟಿ ವನ್ನರ್ಸ್ ಕ್ಲಬ್’ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಫೋಟ್ಟಿ ವನ್ನರ್ಸ್ ಮ್ಯಾನೇಜರ್ ದಿಲೀಪ್ ಚಾಂಡಕ್, ಅತಿಥಿಗಳಾಗಿ ರೌಂಡ್ ಟೇಬಲ್ ಏರಿಯಾ ಚೇರಮನ್ ಸುದರ್ಶನ ಜಾಧವ್, ಲೇಡಿಜ್ ಸರ್ಕಲ್’ನ ಶ್ರೇಯಾ ಸುಂಠನಕರ ಇನ್ನುಳಿದವರು ಉಪಸ್ಥಿತರಿದ್ಧರು.
ನೂತನ ಅಧ್ಯಕ್ಷರಾಗಿ ಮನೋಜ್ ತಲರೇಜಾ, ಉಪಾಧ್ಯಕ್ಷರಾಗಿ ದೇವೇಂದ್ರಸಿಂಗ್ ಖುರಾನಾ, ಕಾರ್ಯದರ್ಶಿಯಾಗಿ ಅಮೀತ್ ಭಾಟೀಯಾ, ಖಜಾಂಚಿಯಾಗಿ ವಿನಾಯಕ ಮಂಗಲವಾಡೆ ಅವರು ಅಧಿಕಾರ ಸ್ವೀಕರಿಸಿದರು. ಟಾಂಜೆಂಟ್ ಅಧ್ಯಕ್ಷರಾಗಿ ರೇಷ್ಮಾ ತಲರೇಜಾ, ಉಪಾಧ್ಯಕ್ಷರಾಗಿ ರೂಪಾ ಕಾಟವಾ, ಕಾರ್ಯದರ್ಶಿಯಾಗಿ ಪೂನಮ್ ಗುಲಬಾನಿ, ಖಜಾಂಚಿಯಾಗಿ ಸವಿತಾ ಮೈತ್ರಾಣಿ ಅವರು ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷರಾದ ನಾಗೇಶ್ ಛಾಬ್ರಿಯಾ ಮತ್ತು ಸಂಗೀತಾ ಚಾಂಡಕ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಫೋಟ್ಟಿ ವನ್ನರ್ಸ್ ಮ್ಯಾನೇಜರ್ ದಿಲೀಪ್ ಚಾಂಡಕ್ ಅವರು, ಫೋಟ್ಟಿ ವನ್ನರ್ಸ್ ಕ್ಲಬ್ ಸಹಭಾಗಿತ್ವದ ಕ್ಲಬ್ ಆಗಿದ್ದು, ವಿವಿಧ ಅರ್ಥಪೂರ್ಣ ಉಪಕ್ರಮಗಳನ್ನು ಆಯೋಜಿಸುತ್ತದೆ. ರಾಣೆಬೆನ್ನೂರಿನಲ್ಲಿ ಶಾಲೆಯ ಅಭಿವೃದ್ಧಿಗೂ ಆರ್ಥಿಕ ಸಹಾಯವನ್ನು ಮಾಡಲಾಗಿದೆ. ಹಲವಾರು ಸದಸ್ಯರು ಕ್ಲಬ್ಬಿನ ಕಾರ್ಯಕ್ಕೆ ಕೈಜೋಡಿಸಿದ್ದು, ಇನ್ನಷ್ಟು ಒಳ್ಳೆಯ ಉಪಕ್ರಮಗಳನ್ನು ಮಾಡಲಾಗುವುದು.
ಲೇಡಿಜ್ ಸರ್ಕಲ್’ನ ಶ್ರೇಯಾ ಸುಂಠನಕರ ಅವರು, ಫೋಟ್ಟಿ ವನ್ನರ್ಸ್ ಕ್ಲಬ್ ಈ ಬಾರಿಯೂ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಹಂತಹಂತವಾಗಿ ಅವುಗಳನ್ನು ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದರು.
ರೌಂಡ್ ಟೇಬಲ್ ಏರಿಯಾ ಚೇರಮನ್ ಸುದರ್ಶನ ಜಾಧವ್ ಅವರು, ಬಾಲ್ಯದಿಂದಲೂ ಹೆಣ್ಣು ಮಕ್ಕಳು ಸಮಾಜವನ್ನು ಬೆಳೆಸಲು ಸಕ್ರಿಯತೆಯನ್ನು ಹೊಂದಿರುವುದನ್ನು ಕಾಣಿದ್ಧೇವೆ. ಈ ನಾಲ್ಕು ವರ್ಷದಲ್ಲಿ ಫೋಟ್ಟಿ ವನ್ನರ್ಸ್ ಕ್ಲಬ್ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ಕಳೆದ ಬಾರಿ ದೃಶ್ಯಂ ಎ.ಐ ಯೋಜನೆ ಮೂಲಕ ದೃಷ್ಠಿಹೀನರಿಗೆ ದೃಷ್ಠಿಯನ್ನು ನೀಡುವ ಕಾರ್ಯವನ್ನು ಮಾಡಲಾಗಿತ್ತು. ಈ ಬಾರಿಯೂ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ನೂತನ ಅಧ್ಯಕ್ಷರಾಗಿ ಮನೋಜ್ ತಲರೇಜಾ ಅವರು ಫೋಟ್ಟಿ ವನ್ನರ್ಸ್ ಕ್ಲಬ್ ಹಲವಾರು ಸಮಾಜೋಪಯೋಗಿ ಕಾರ್ಯಗಳನ್ನು ಮಾಡಿದೆ. ಕ್ಲಬ್ ಕೂಡ ಈಗ ಎಐ ಯುಗದಲ್ಲಿ ಅಪಗ್ರೆಡ್ ಆಗುತ್ತಿರುವುದು ಸಂತಸದ ಸಂಗತಿ. ಅತ್ಯುತ್ತಮ ಮತ್ತು ಸಕ್ರಿಯ ಭಾರತವನ್ನು ನಿರ್ಮಿಸಲು ಕ್ಲಬ್ಬಿನ ಉದ್ಧೇಶಗಳನ್ನು ಅರಿತು ಎಲ್ಲರೂ ಹೆಚ್ಚೆಚ್ಚು ತಮ್ಮ ಸಹಭಾಗಿತ್ವವನ್ನು ಹೊಂದಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಫೋಟ್ಟಿ ವನ್ನರ್ಸ್ ಕ್ಲಬ್’ ಮತ್ತು ಬೆಲಗಾಮ್ ಚಾಲೆಂಜರ್ಸ್ ಟ್ಯಾಜೆಂಟ್-38 ಕ್ಲಬ್’ನ ಸದಸ್ಯರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.