ಬೆಂಗಳೂರು – ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಖಾಸಗಿ ಶಾಲೆಗಳನ್ನು ಬಂದ್ ಮಾಡಲು ಖಾಸಗಿ ಶಾಲೆಗಳ ಒಕ್ಕೂಟ- ರುಪ್ಸ್ ನಿರ್ಧರಿಸಿದೆ.
ಸೋಮವಾರದಿಂದ ಶಾಲೆಗಳನ್ನು ಮುಚ್ಚುವುದಲ್ಲದೆ ಆನ್ ಲೈನ್ ಕ್ಲಾಸ್ ಗಳನ್ನು ಕೂಡ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ರುಪ್ಸ್ ನಲ್ಲಿ ನೋಂದಾಯಿತ 12800 ಶಾಲೆಗಳಿವೆ. ಶಾಲೆಗಳ ನೋಂದಣಿ ನವೀಕರಿಸುವ ನೂತನ ರೂಲ್ಸ್ ಸೇರಿದಂತೆ ವಿವಿಧ 15 ಬೇಡಿಕೆಗಳನ್ನು ಒಕ್ಕೂಟ ಸರಕಾರದ ಮುಂದಿಟ್ಟಿದೆ.
ಸರಕಾರ ಬೇಡಿಕೆಗಳಿಗೆ ಮಣಿಯುವವರೆಗೂ ಹೋರಾಟ ನಡೆಸಲಾಗುವುದು. ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.