ಬೆಂಗಳೂರು, ಜೂನ್ 23: ಸಾಂಬಾರ್ ಮಾಡುವ ವಿಚಾರಕ್ಕೆ ಸ್ನೇಹಿತರ (Friends) ನಡುವೆ ಗಲಾಟೆಯಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರಿನ (Bengaluru) ತಲಘಟ್ಟಪುರದಲ್ಲಿ ರವಿವಾರ ತಡರಾತ್ರಿ ಘಟನೆ ನಡೆದಿದೆ. ನೇಪಾಳ ಮೂಲದ ಬಹದ್ದೂರ್ ಕೊಲೆಯಾದ ವ್ಯಕ್ತಿ. ಮಹೇಂದ್ರ ಕೊಲೆ ಮಾಡಿದ ಆರೋಪಿ.
ಬಹದ್ದೂರ್ ಮತ್ತು ಮಹೇಂದ್ರ ನಡುವೆ ರವಿವಾರ (ಜೂ.22) ರಾತ್ರಿ ಸಾಂಬಾರ್ ಮಾಡುವ ವಿಚಾರಕ್ಕೆ ರೂಂನಲ್ಲಿ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೆ ಏರಿದ್ದು ಬಹದ್ದೂರ್ ಮೇಲೆ ಮಹೇಂದ್ರ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಕೊಲೆಯಾದ ಬಹದ್ದೂರ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು.
ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದನು. ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ
Laxmi News 24×7