Breaking News

ಗೋವಾದಲ್ಲಿ ನಕಾರಾತ್ಮಕ ಅಭಿಪ್ರಾಯ ಹೊಂದಿದವರಿಗೆ ಮತ್ತು ದೇಶ ವಿರೋಧಿ ಶಕ್ತಿಗಳಿಗೆ ಜಾಗ ಇಲ್ಲ: ಪ್ರಮೋದ್ ಸಾವಂತ್

Spread the love

ಪಣಜಿ,ಡಿ.10-ಗೋವಾದಲ್ಲಿ ನಕಾರಾತ್ಮಕ ಅಭಿಪ್ರಾಯ ಹೊಂದಿದವರಿಗೆ ಮತ್ತು ದೇಶ ವಿರೋಧಿ ಶಕ್ತಿಗಳಿಗೆ ಜಾಗ ಇಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುಡುಗಿದ್ದಾರೆ. ಗೋವಾ ವಿಮೋಚನಾ ದಿನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ದ್ವಿಪಥ ರೈಲ್ವೆ ಹಳಿ ಯೋಜನೆಗೆ ವಿರೋಸುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ.

ಗೋವಾ ರಾಜ್ಯದವರು ಆಶಾವಾದಿಗಳು. ಅವರ ನಡುವೆ ನಕಾರಾತ್ಮಕ ಭಾವನೆ ಉಳ್ಳವರಿಗೆ, ವಿಛಿದ್ರಕಾರಿ ಮನೋಭಾವವುಳ್ಳವರಿಗೆ ಜಾಗವಿಲ್ಲ ಎಂದಿದ್ದಾರೆ. ಗೋವಾಕ್ಕೆ ಕಲ್ಲಿದ್ದಲು ಸಾಗಾಣಿಕೆ ಸಲುವಾಗಿ ರೈಲ್ವೆ ಹಳಿಗಳನ್ನು ದ್ವಿಪಥಕ್ಕೆ ಪರಿವರ್ತಿಸುವ ಕಾಮಗಾರಿಯನ್ನು ಸರ್ಕಾರ ಕೈಗೆತ್ತಿಕೊಂಡಿತ್ತು.

ಅದನ್ನು ತೀವ್ರವಾಗಿ ವಿರೋಧಿಸಿರುವ ಪರಿಸರವಾದಿಗಳು ಮತ್ತು ವಿರೋಧಪಕ್ಷಗಳು ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದಲ್ಲಿ ಮರಗಳನ್ನು ಕಡಿದು ಪರಿಸರ ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿದೆ.

ಇದನ್ನು ಅಲ್ಲಗೆಳೆದಿರುವ ಪ್ರಮೋದ್ ಸಾವಂತ್, ಯೋಜನೆಗಳಿಂದ ಯಾವುದೇ ಪರಿಸರ ನಾಶವಾಗುವುದಿಲ್ಲ. ಸುಳ್ಳು ಆರೋಪಗಳಿಗೆ ಯಾರೂ ಕಿವಿಗೊಡಬೇಡಿ ಎಂದಿರುವುದಲ್ಲದೆ, ಕಡಿಯಲಾದ ಮರಗಳಿಗೆ ಬದಲಾಗಿ ಮತ್ತಷ್ಟು ಮರಗಳನ್ನು ಬೆಳೆಸುವ ಭರವಸೆ ನೀಡಿದ್ದಾರೆ.


Spread the love

About Laxminews 24x7

Check Also

ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

Spread the loveಮೈಸೂರು: ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ