ಚುರುಮುರಿಯಾ” ಹೃದಯಸ್ಪರ್ಶಿ ಚಲನಚಿತ್ರ; ಸಾಹಿತಿ ಸರಜೂ ಕಾಟ್ಕರ್
“ಚುರುಮುರಿಯಾ” ಹೃದಯಸ್ಪರ್ಶಿ ಚಲನಚಿತ್ರಸಾಹಿತಿ ಸರಜೂ ಕಾಟ್ಕರ್ ಅಭಿಪ್ರಾಯಚುರುಮುರಿಯಾ ಚಲನಚಿತ್ರ ಉದ್ಘಾಟನೆ
ಚುರುಮುರಿ ಮಾರುವವನ ಪಾತ್ರದಲ್ಲಿ ಮಹಾದೇವ ಹಡಪದ ಅವರ ಅಭಿನಯ
ಬದುಕಿನ ಸಂಧ್ಯಾಕಾಲದಲ್ಲಿ ತನ್ನ ಬದುಕಿನ ಸರ್ವಸ್ವವನ್ನು ತನ್ನವರಿಗೆ ನೀಡಿ ಸ್ವಾವಲಂಬಿ ಜೀವನವನ್ನು ನಡೆಸುತ್ತ ತನ್ನ ಮನೆತನ ತನ್ನವರೆಲ್ಲರನ್ನು ಬಿಟ್ಟುಕೊಡದೇ ಅಪ್ಪಿಕೊಂಡು ಅವಿಭಕ್ತ ಕುಟುಂಬಿ ನಾನು ಮಕ್ಕಳುಗಳೊಂದಿಗೇ ಬದುಕಿದ್ದೇನೆಂದು ಹೇಳುವ ಒಂಟಿ ಬದುಕು ಸಾಗಿಸುವ “ಚುರುಮುರಿಯಾ” ರಾಮಚಂದ್ರ ಸ್ವಾವಲಂಬಿಯಾಗಿ ಸಂತೋಷದಿಂದ ಬದುಕಿದ್ದಾನೆ. ಕಥಾನಾಯಕಿಯೂ ಕೂಡ ಇಲ್ಲಿ ಒಂಟಿಯೇ. ಅವಳೂ ತನ್ನ ಮನದಾಳದ ಮಾತನ್ನು ತೆರೆದುಕೊಳ್ಳದೆ ಅಂತ್ಯವನ್ನು ಕಾಣುವ, ಚಿತ್ರಕಥೆಲೇಖಕಿ ನೀಲಗಂಗಾ ಚರಂತಿಮಠ ಅವರ ಕಥೆ “ಚುರುಮುರಿಯಾ” ವೃದ್ಧಾಪ್ಯದ ದಾರುಣ ಬದುಕನ್ನು ಚಿತ್ರಿಸುತ್ತಿದೆ ಎಂದು ಚುರುಮುರಿಯಾ ಚಲನಚಿತ್ರ ಉದ್ಘಾಟನೆ ಮಾಡಿದ ಸಾಹಿತಿ ಸರಜೂ ಕಾಟ್ಕರ್ ಹೇಳಿದರು.
ಚುರುಮುರಿ ಮಾರುವವನ ಪಾತ್ರದಲ್ಲಿ ಮಹಾದೇವ ಹಡಪದ ಅವರ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಲೇಖಕಿ ಶಾರದಾ ಮುಳ್ಳೂರ ಅವರು ಆಭಿನಯಿಸಿರುವರು. ಉತ್ತರ ಕರ್ನಾಟಕದ ಯುವ ನಿರ್ದೇಶಕಿ ಸುಪ್ರಿಯಾ ಅವರ ಪ್ರಯತ್ನ ಮೆಚ್ಚಲೇಬೇಕು. ಎಲ್ಲರೂ ನೋಡಲೇಬೇಕಾದ ಚಲನಚಿತ್ರ “ಚುರುಮುರಿಯಾ”. ಬೆಳಗಾವಿ ಸಿನಿಮಾ ರಂಗಕ್ಕೆ ದೊಡ್ಡ ಪರಂಪರೆಯೇ ಇದೆ. ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರನ್ನು ಇಲ್ಲಿ ನೆನೆಯಲೇಬೇಕು. ರಂ. ಶಾ. ಲೋಕಾಪೂರ, ಸರಜೂ ಕಾಟ್ಕರ್ ಅವರ ನಂತರ ನೀಲಗಂಗಾ ಅವರ “ಚುರುಮುರಿಯಾ” ಮಾರುವ ಸಾಮಾನ್ಯ ಮನುಷ್ಯನ ಬದುಕು ಆಧಾರಿತ ಕಥೆ ಪ್ರದರ್ಶನಹೊಳ್ಳುತ್ತಿರುವುದು ಸಂತೋಷ. ಇಲ್ಲ ಕಥಾನಾಯಕ, ಕಥಾನಾಯಕಿ, ಲೇಖಕಿಯ ಬದುಕು ಒಂದೇ. ಇಬ್ಬರೂ ತಮ್ಮ ಬದುಕಿನ ಸತ್ಯವನ್ನು ಅನಾವರಣಗೊಳಿಸದೇ ಇರುವುದು ಹಿರಿಯ ನಾಗರಿಕರ ದಾರುಣ ಸ್ಥಿತಿಯನ್ನು ಪ್ರತಿನಿಧಿಸುತ್ತಿದೆ.
ಕಾರ್ಯಕ್ರಮದಲ್ಲಿ ಸಾಹಿತಿ ಎಲ್.ಎಸ್. ಶಾಸ್ತ್ರಿ, ಶ್ರೀ. ಕೆ. ಎಚ್. ಚೆನ್ನೂರ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರೀ. ಸುನೀಲ ಪಾಟೀಲ, ಸಿ.ಪಿ.ಆಯ್. ಸಂಘಟಕಿ ಶೈಲಜಾ ಭಿಂಗ್ ಲೇಖಕಿ ನೀಲಗಂಗಾ ಚರಂತಿಮಠ, ರತ್ನಕ್ಕಾ ಬೆಲ್ಲದ ಸುಮಾ ಕಿತ್ತೂರ, ಬಸವರಾಜ ಗಾರ್ಗಿ ಹಿರೇಮಠ ಅವರು ಭಾಗವಹಿಸಿದ್ದರು. ಸ್ವಾಗತ ದೀಪಿಕಾ ಚಾಟಿ, ನಿರೂಪಣೆ ಭಾರತಿಮಠದ, ವಂದನಾರ್ಪಣೆ ಹೇಮಾ ಸೊನೊಳ್ಳಿ ಮಾಡಿದರು. “ಚುರುಮುರಿಯಾ” ಕಲಾತ್ಮಕ ಚಲನಚಿತ್ರ ಪ್ರತಿದಿನ ಸಂತೋಷ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ.