ಧಾರವಾಡದಲ್ಲಿ ಇಂದು ಅಖಿಲ ಭಾರತ ಮಾಧ್ವ ಮಹಾಮಂಡಲ ಧಾರವಾಡ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆಶೀರ್ವಾದವನ್ನು ಪಡೆಯಲಾಯಿತು.
ಪೇಜಾವರ ಮಠಾಧೀಶರಾದ ಪ್ರಾಥಃಸ್ಮರಣೀಯ, ಯತಿಕುಲ ಚಕ್ರವರ್ತಿ, ಪದ್ಮವಿಭೂಷಣ ಪುರಸ್ಕೃತ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶ್ವ ತೀರ್ಥ ಶ್ರೀಪಾದಂಗಳವರು ಶ್ರೀಮನ್ ಮಧ್ವಾಚಾರ್ಯರ ಸಿದ್ಧಾಂತ ಪ್ರಚಾರಕ್ಕೆಂದೇ ಸ್ಥಾಪಿಸಿದ ಸಂಸ್ಥೆ ಅಖಿಲ ಭಾರತ ಮಾಧ್ವ ಮಹಾಮಂಡಲ. ಶ್ರೀಗಳವರು ಕರ್ನಾಟಕದ ಅನೇಕ ಕಡೆ ಮಂಡಲದ ಶಾಖೆಗಳನ್ನು ಈಗಾಗಲೇ ಸ್ಥಾಪಿಸಿದ್ದು ಇನ್ನೂ ಅನೇಕ ಸ್ಥಳಗಳಲ್ಲಿ ಮಂಡಲದ ಶಾಖೆಗಳನ್ನು ಪ್ರಾರಂಭಿಸುವ ಕನಸುಕಂಡಿದ್ದರು. ಈ ನಿಟ್ಟಿನಲ್ಲಿ ಶ್ರೀಹರಿವಾಯುಗುರುಗಳ ಪರಮಾನು ಗ್ರಹದಿಂದ ಧಾರವಾಡ ಮಾಳಮಡ್ಡಿಯ ಪ್ರಲ್ಹಾದ್ ವಿದ್ಯಾರ್ಥಿನಿಲಯದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲದ ಶಾಖೆಯನ್ನು ಪ್ರಾರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಉಪಸ್ಥಿತರಿದ್ದರು.