ಬೆಳಗಾವಿ ರಂದು ಬೆಳಗಾವಿಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ಲೋಕ ಅದಾಲತ್ ನಡೆಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶ್ ಸಂದೀಪ್ ಪಾಟೀಲ್ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲೋಕ ಅದಾಲತ್ ನಲ್ಲಿ ಕಕ್ಷಿದಾರರು ದ್ವೇಷವನ್ನು ಕಟ್ಟಿಕೊಂಡು ಹಳೆಯ ಪ್ರಕರಣಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಂಥವರನ್ನು ಒಂದುಗೂಡಿಸಿ ಇಬ್ಬರು ಕಕ್ಷಿದಾರರಿಗೆ ಮನವರಿಕೆ ಮಾಡಿಕೊಟ್ಟು ಪ್ರಕರಣವನ್ನು ಇತ್ಯರ್ಥಗೊಳಿಸುವ ಪ್ರಯತ್ನವನ್ನು ಮಾಡಲಾಗುವುದು ಎಂದರು.
ಲೋಕ ಅದಾಲತ್ ನಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು. ಕಕ್ಷಿದಾರರ ಸಮಯ, ಹಣ ಉಳಿಸುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸುವುದು. ಬೆಳಗಾವಿ ಜಿಲ್ಲೆಯಲ್ಲಿ ಖಾಯಂ ಲೋಕ ಅದಾಲತ್ ಇವೆ. ಜಿಲ್ಲಾ ನ್ಯಾಯಧೀಶರು ಆ ಪ್ರಕರಣವನ್ನು ನಡೆಸುತ್ತಿದ್ದಾರೆ. ಅಲ್ಲಿಯೂ ಕಕ್ಷಿದಾರರು ಹಾಜರಾಗಿ ಬಗೆಹರಿಸಿಕೊಳ್ಳಬಹುದು ಎಂದರು.
ಲೋಕ ಅದಾಲತ್ ನಲ್ಲಿ ತತ್ವರಿತ ನ್ಯಾಯ ಸಿಗುತ್ತದೆ ಹಾಗೂ ಯಾವುದೇ ರೀತಿಯ ಶುಲ್ಕ ಪಡೆಯುವುದಿಲ್ಲ. ಕ್ರಿಮಿನಲ್ ಪ್ರಕರಣ, 420 ಪ್ರಕರಣಗಳು ಲೋಕ ಅದಾಲತ್ ನಲ್ಲಿ ಬರುತ್ತೆವೆ. ಗಲಾಟೆಯ ವಿಚಾರಗಳನ್ನು ಸಹ ಪರಸ್ಪರ ಹೊಂದಾಣಿಕೆ ಮಾಡಿಕೊಂಡರೆ ಅವರಿಗೆ ನ್ಯಾಯ ದೊರಕಿಸಿಕೊಡಬಹುದು ಎಂದರು.
1,37,746 ಬಾಕಿ ಇರುವ ಪ್ರಕರಣದಲ್ಲಿ 12,000 ಪ್ರಕರಣಗಳು ರಾಜಿಯಾಗುವುದಾಗಿವೆ. ಇನ್ನೂ ಸುಮಾರು ಪ್ರಕರಣಗಳು ಇವೆ. ಇದು ಜನರಿಗೆ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದರು.