ಬೆಳಗಾವಿ : ಅನಗೋಳ ಸಂತ ಮೀರಾ ಶಾಲೆಯಲ್ಲಿ ಮಕ್ಕಳಿಗೆ ಶಾಸ್ತ್ರೋಕ್ತ ಅಕ್ಷರಾಭ್ಯಾಸ ಆರಂಭ
ಬೆಳಗಾವಿ ಅನಗೋಳ ಸಂತಮೀರಾ ಶಾಲೆ
3 ರಿಂದ 8 ವರ್ಷದ ಮಕ್ಕಳಿಗೆ ಶಾಸ್ತ್ರೋಕ್ತ ಅಕ್ಷರಭ್ಯಾಸ
ಸಂಪ್ರದಾಯದಂತೆ ಶುಭದಿನದಂದು ಅಕ್ಷರಾಭ್ಯಾಸ ಆರಂಭ
ಸಂತೋಷ ಜೋಶಿಯಿಂದ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸಕ್ಕೆ ಚಾಲನೆ
ಬೆಳಗಾವಿ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಗುರುವಾರ ಮಕ್ಕಳಿಗೆ ಸಾಂಪ್ರದಾಯಿಕವಾಗಿ ಅಕ್ಷರಾಭ್ಯಾಸವನ್ನು ಆರಂಭಿಸಲಾಯಿತ
ಹಿಂದೂ ಸಂಸ್ಕೃತಿ ಅಥವಾ ಸಂಪ್ರದಾಯದಂತೆ ಶುಭ ದಿನದಂದು ಅಕ್ಷರಾಭ್ಯಾಸ ಆರಂಭ ಮಾಡಿದ ಮಗು ಮುಂದೆ ವಿದ್ಯಾವಂತನಾಗಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುತ್ತದೆ, ಈ ಅಕ್ಷರಭ್ಯಾಸದಲ್ಲಿ 150 ಮಕ್ಕಳ ಜೊತೆ ಪಾಲಕರು ಪಾಲ್ಗೊಂಡಿದ್ದರು,
ಸಂತೋಷ್ ಜೋಶಿ ಇವರು ಅಕ್ಷರಾಭ್ಯಾಸ ಮತ್ತು ಸರಸ್ವತಿ ಪೂಜೆಯನ್ನು ವಿಧಿ ವಿಧಾನದಿಂದ ಅಕ್ಕಿಯ ಮೇಲೆ ಅಕ್ಷರವನ್ನು ಮಕ್ಕಳಿಗೆ ಮಾತೆಯರ ಮೂಲಕ ಬರೆಸಲಾಯಿತು, ಮಕ್ಕಳಿಗೆ ಆರತಿಯನ್ನು ಮಾಡಿ ಗಂಧ ತಿಲಕವಿಡಲಾಯಿತು. ಮಕ್ಕಳ ಕೈಬೆರಳುಗಳಿಂದ ಓಂಕಾರಕ್ಕೆ ಗಂಧದ ಅಚ್ಚನ್ನು ಒತ್ತಿಸಲಾಯಿತು. ಸರಸ್ವತಿ ಪೂಜೆಯನ್ನು ಶಾಲೆಯ ಮುಖ್ಯಾಧ್ಯಾಪಕಿಯರಾದ ಸುಜಾತ ದಪ್ತೇದಾರ,
ಶಿಕ್ಷಕಿಯರಾದ ಋತುಜಾ ಜಾಧವ ಮತ್ತು ಶ್ರೀಮತಿ ಆಶಾ ಕುಲಕರ್ಣಿ ಮಾತಾಜಿ ಇವರಿಂದ ಮಾಡಿಸಲಾಯಿತು
ವಿದ್ಯಾರ್ಥಿಗಳು ಪಾಲಕರು ಶಿಕ್ಷಕರು ಸಿಬ್ಬಂದಿ ಉಪಸ್ಥಿತರಿದ್ದರು