ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ತುರಕರಶೀಗಿಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕಳಪೆ ಬೀಜ ವಿತರಣೆ ಮಾಡಲಾಗಿದ್ದು, ಬೀಜ ಕಂಪನಿ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ವಿತರಿಸಲಾಗುತ್ತಿರುವ ಸೋಯಾಬೀಜಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡದೆ ನೇರವಾಗಿ ಸೊಸೈಟಿಗಳಿಗೆ ಕೊಡಮಾಡಿದ್ದಾರೆ ಅದನ್ನೇ ರೈತರಿಗೆ ವಿತರಿಸಲಾಗಿದೆ ಈ ಹಿನ್ನೆಲೆಯಲ್ಲಿ ಬೈಲಹೊಂಗಲ ತಾಲೂಕು ಕೃಷಿ ಅಧಿಕಾರಿ ಬಸವರಾಜ್ ದಳವಾಯಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈಗಾಗಲೇ ಸುಮಾರು ಸಾವಿರಾರು ಎಕರೆ ಜಮೀನಿನಲ್ಲಿ ಸೋಯಾಬಿನ್ ಬಿತ್ತಲಾಗಿದೆ ಬೀಜ ಮೊಳಕೆ ಒಡೆಯದೆ ರೈತರು ಕಂಗಲಾಗಿದ್ದಾರೆ.
ಪರ್ಯಾಯ ಬೀಜ ವಿತರಿಸುವುದಾಗಿ ಕೃಷಿ ಅಧಿಕಾರಿಗಳು ಭರವಸೆ ನೀಡಿದರೂ ಒಪ್ಪಿಕೊಳ್ಳದ ರೈತರು ನಮಗೆ ಕೇವಲ ಬೀಜ ಅಷ್ಟೇ ಅಲ್ಲದೆ ಬಿತ್ತನೆಗಾಗಿ 20 ರಿಂದ 30 ಸಾವಿರ ಹಣ ಖರ್ಚು ಮಾಡಿದ್ದೇವೆ ಆ ಪರಿಹಾರವನ್ನು ಸರ್ಕಾರ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ
ಇಂತಹ ಮೋಸಕ್ಕೆ ಕಡಿವಾಣ ಹಾಕುವುದರ ಮೂಲಕ ಸರ್ಕಾರ ಅನ್ನದಾತನಿಗೆ ನ್ಯಾಯ ಒದಗಿಸಬೇಕು