ಬೆಳಗಾವಿ ಶಹಪುರ್ ಬಸವನ ಗಲ್ಲಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇವಿಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಜರುಗಿತು
ಶಹಪೂರ ಬಸವಣ್ಣಗಲ್ಲಿಯ ಶ್ರೀ ಮಹಾಲಕ್ಷ್ಮಿ ದೇವಿಯ ದೇವಸ್ಥಾನ ನೂರಾರು ವರ್ಷಗಳಿಂದ ಜಾಗೃತ ಸ್ಥಳವಾಗಿದೆ ಮಂಗಳವಾರ ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ ದಿನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ ವಿಶೇಷ ಸಂದರ್ಭಗಳಲ್ಲಿ ದೇವಿಯ ಉತ್ಸವ ಆಚರಣೆಗಳು ನಡೆಯುತ್ತವೆ.ಗುರುವಾರ ದೇವಿಯ 113 ನೆ ಜಯಂತಿ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗಿನ ಜಾವ ದೇವಿಗೆ ಪೂಜೆ ಸಲ್ಲಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವಿಯ ಪಾದುಕೆಗಳಿಗೆ ಅಭಿಷೇಕ ಮಾಡಲಾಯಿತು. ನಂತರ ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ನಂತರ ಪಾಲಕಿ ಸೇವೆ ಹಾಗೂ ಸುಮಂಗಲೆಯರಿಂದ ಕುಂಭ ಕಳಶ ಯಾತ್ರೆ ಜರುಗಿತು.
ಈ ಕುರಿತು ಸುತಾರ್ ಕುಟುಂಬದ ಅರ್ಚಕಿ ವೈಶಾಲಿ ಪುಂಡಲಿಕ್ ಸುತಾರ ಹೆಚ್ಚಿನ ಮಾಹಿತಿ ನೀಡಿ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಒಂದು ಜಾಗೃತ ತಾಣವಾಗಿದೆ 113 ವರ್ಷಗಳಿಂದ ಯಾವುದೇ ಜಾತ್ರಾ ಮಹೋತ್ಸವ ಆಗಿರಲಿಲ್ಲ ಈಗ ಅರ್ಚಕ ಕುಟುಂಬದ ಎಲ್ಲರೂ ಸೇರಿ ನಿರ್ಧಾರ ಮಾಡಿ ದೇವಿಯ ಒಂದು ನೂರಾ ಹದಿಮೂರನೇ ಜಯಂತಿ ಹಾಗೂ ಜಾತ್ರಾ ಮಹೋತ್ಸವ ಮಾಡುತಿದ್ದೇವೆ. ಇನ್ನು ಮುಂದೆ ಭಕ್ತರ ಸಹಕಾರದಿಂದ ಪ್ರತಿ ವರ್ಷವೂ ಈ ಜನ್ಮೋತ್ಸವ ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ ದೇವಿಯ ಕೃಪೆಯಿಂದ ಎಲ್ಲವೂ ಯಶಸ್ವಿಯಾಗಿದೆ.
ಭಕ್ತಾದಿಗಳು ಎಲ್ಲ ಸಂಘಟನೆಯವರು ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಡುವ ಉದ್ದೇಶವಿದೆ. ಇಂದು ಬೆಳಗಿನ ಜಾವ ನಾಥ್ ಪೈ ಸರ್ಕಲ್ ಲಕ್ಷ್ಮಿ ರೋಡ್ ನಲ್ಲಿರುವ ದೇವಿಯ ಮೂಲ ಸ್ಥಳಕ್ಕೆ ಹೋಗಿ ದೇವಿಯ ಪಾದುಕೆಗಳಿಗೆ ಅಭಿಷೇಕ ಮಾಡಿ ಕುಂಭ ಪೂಜೆ ಹಾಗೂ ಮೆರವಣಿಗೆ ಮಾಡಿದೆವು ನಂತರ ಗಣೇಶ್ಪುರ ಮತ್ತು ಬಸವಣ್ಣ ಗಲ್ಲಿಯ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ನಡೆಸಲಾಯಿತು. ನಂತರ ಅಲ್ಲಿಂದ ಪಾಲ್ಕಿ ಉತ್ಸವವನ್ನು ದೇವಸ್ಥಾನದವರೆಗೆ ತರಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಎಲ್ಲರೂ ದೇವಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಬೇಕೆಂದು ಅವರು ಮನವಿ ಮಾಡಿದರು.
ಮಹೋತ್ಸವ ನಿಮಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಗೆ ಉಡಿತುಂಬಿ ದರ್ಶನ ಪಡೆದು ಕೃಪೆಗೆ ಪಾತ್ರರಾದರು