Breaking News

ಮಕ್ಕಳ ಹೃದ್ರೋಗ ಉಚಿತ ತಪಾಸಣಾ ಶಿಬಿರ

Spread the love

ಮಕ್ಕಳ ಹೃದ್ರೋಗ ಉಚಿತ ತಪಾಸಣಾ ಶಿಬಿರ
ಬೆಳಗಾವಿ: ಚಿಕ್ಕಮಕ್ಕಳ ಹೃದಯ ಸಂಬಂಧಿತ ಉಚಿತ ತಪಾಸಣಾ ಶಿಬಿರವನ್ನು ನೆಹರು ನಗರದ ಅರಿಹಂತ ಆಸ್ಪತ್ರೆಯಲ್ಲಿ ಇದೇ ದಿ. 13 ಹಾಗೂ 14 ಜೂನ್ 2025 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಚಿಕ್ಕಮಕ್ಕಳ ಹೃದಯ ತಜ್ಞವೈದ್ಯರಾದ ಡಾ. ಗೋವಿಂದ್ ಔರಾದಕರ ಅವರು ಮಕ್ಕಳನ್ನು ಸಮಗ್ರವಾಗಿ ತಪಾಸಿಸಿ ಸೂಕ್ತ ಸಲಹೆ ನೀಡಲಿದ್ದಾರೆ.
ಶಿಬಿರದಲ್ಲಿ ರಕ್ತದೊತ್ತಡ (BP), ರ್ಯಾಂಡಮ್ ಬ್ಲಡ್ ಶುಗರ್ (RBS), ಇಸಿಜಿ (ECG) ಹಾಗೂ ಇಕೋಕಾರ್ಡಿಯೋಗ್ರಾಫಿ(ECHO)ಯನ್ನು ಉಚಿತವಾಗಿ ನೆರವೇರಿಸಲಾಗುತ್ತದೆ.
ಚಿಕ್ಕಮಕ್ಕಳಲ್ಲಿ ಸಾಮಾನ್ಯವಾಗಿ ಉಸಿರಾಟದ ತೊಂದರೆ, ಮೇಲಿಂದ ಮೇಲೆ ನೆಗಡಿ, ತೀವ್ರವಾದ ಎದೆಬಡಿತ, ಬೆಳವಣಿಗೆಯಲ್ಲಿ ತೊಂದರೆ, ಮಗು ಬಹಳಷ್ಟು ಅತ್ತಾಗ ದೇಹವು ನೀಲಿ ಬಣ್ಣಕ್ಕೆ ತಿರುಗುವದು ಸೇರಿದಂತೆ ಹೃದಯ ಸಂಬಂಧಿತ ತೊಂದರೆಯಿಂದ ಬಳಲುತ್ತಿರುವ ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಂಡು ಹೃದಯ ತಪಾಸಿಸಿಕೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. 9036102390, 9606999378 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

Spread the love

About Laxminews 24x7

Check Also

ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ

Spread the love ನಿಪ್ಪಾಣಿಯ ತವಂದಿ ಘಾಟನಲ್ಲಿ ಕಂದಕಕ್ಕೆ ಬಿದ್ದ ಕಂಟೇನರ್ ವಾಹನ ಚಿಕ್ಕೋಡಿ:ನಿಪ್ಪಾಣಿ ತಾಲೂಕಿನ ತವಂದಿ ಘಾಟ್‌ನಲ್ಲಿ ಕಂಟೇನರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ