ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ನಕಲಿ ನೋಟುಗಳನ್ನು ಕೊಟ್ಟ ಕಿರಾತಕನ ಬಂಧನ
ವ್ಯವಹಾರವೊಂದಕ್ಕೆ ಕಡಿಮೆ ಬಡ್ಡಿದರದಲ್ಲಿ ಹಣ ಕೊಡಿಸುವುದಾಗಿ ನಂಬಿಸಿದ್ದ ಆರೋಪಿಯೋರ್ವನಿಂದ ಬರೋಬ್ಬರಿ 1,87,45,000 ನಕಲಿ ನೋಟುಗಳನ್ನು ಜಪ್ತಿ ಮಾಡುವಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಯಶಸ್ವಿಯಾಗಿದೆ.
ಈ ಕುರಿತು ನಗರದಲ್ಲಿಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ಹೇಳಿ ಸಾಲದ ರೂಪದಲ್ಲಿ ನಕಲಿ ನೋಟುಗಳನ್ನು ನೀಡಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸುಧೀರ್ ಮೆಹ್ತಾ ಅಲಿಯಾಸ್ ಮೊಹಮ್ಮದ್ ಆಸೀಪ್ ಎಂಬಾತನನ್ನು ಬಂಧನ ಮಾಡಿ ನಕಲಿ ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ ಎಂದರು.
ಪುಣೆ ಮೂಲದ ಅಶ್ವಿನಿ ಪೆದ್ದವಾಡ ಹಾಗೂ ಆಕೆಯ ಪುತ್ರಿ ಪೃಥಾಳಿಗೆ ವ್ಯವಹಾರವೊಂದಕ್ಕೆ ಆರೋಪಿ ಮೊಹಮ್ಮದ್ ಆಸೀಪ್ 50 ಕೋಟಿ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಕೊಡಿಸುವುದಾಗಿ ನಂಬಿಸಿದ್ದ ಅಲ್ಲದೇ ಪ್ರೋಸೆಸ್ಸಿಂಗ್ ಫೀಸ್ 60 ಲಕ್ಷ ರೂ. ನೀಡಬೇಕು ಎಂದು ನಂಬಿಸಿದ್ದ 60 ಲಕ್ಷ ಅಸಲಿ ಹಣ ಕೊಟ್ಟು ಎರಡು ಕೋಟಿ ನಕಲಿ ನೋಡಿ ನೀಡಿ ವಂಚನೆ ಎಸಗಿದ್ದು, ಈ ಮೂಲಕ ಅಸಲಿ ಹಣ ನೀಡಿ ನಕಲಿ ನೋಟು ಪಡೆದು ಮಹಿಳಾ ಉದ್ಯಮಿ ವಂಚನೆಗೆ ಒಳಗಾಗಿದ್ದಾಳೆ. ಫೃಥಾಳ ತಾಯಿ ಅಶ್ವಿನಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು, ಇನ್ನೂ ಪೃಥಾಳನ್ನು ಸಂಪರ್ಕಿಸಲು ಪ್ರತ್ಯೇಕವಾದ ಮೊಬೈಲ್, ಪ್ರತಿ ನಂಬರ್ ಬಳಕೆ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ ಎಂದರು.
ರಿಯಲ್ ಎಸ್ಟೇಟ್ ಉದ್ಯಮಿ ಹೆಸರಿನಲ್ಲಿ 500 ಮುಖ ಬೆಲೆಯ ನಕಲಿ ನೋಟುಗಳ ಜಪ್ತಿ ಮಾಡಿದ್ದು, ಅದರಲ್ಲಿ 5 ಸಾವಿರ ರೂ. ಮಾತ್ರ ಅಸಲಿ ನೋಟುಗಳು ಪತ್ತೆಯಾಗಿದೆ.
ಒಟ್ಟು 1,87, 45,000 ರೂ. ನಕಲಿ ನೋಟ್ ಜೊತೆಗೆ ಒಂದು ಫೋರ್ಡ್ ಇಕೋ ಸ್ಪೋರ್ಟ್ಸ್ ಕಾರು ಜಪ್ತಿ ಮಾಡಲಾಗಿದೆ ಎಂದರು.