Breaking News

ಉಗಾರ್ – ಮಂಗಸೂಳಿ ಬಸ್ ಸಂಚಾರಕ್ಕೆ ಶಾಸಕ ರಾಜು ಕಾಗೆ ಚಾಲನೆ

Spread the love

ಉಗಾರ್ – ಮಂಗಸೂಳಿ ಬಸ್ ಸಂಚಾರಕ್ಕೆ ಶಾಸಕ ರಾಜು ಕಾಗೆ ಚಾಲನೆ
ಕಾಗವಾಡ : ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ವತಿಯಿಂದ ಪ್ರತಿಯೊಬ್ಬರಿಗೆ ಬಸ್ಸ ಸೇವೆ ನೀಡಲು ವಿಶೇಷವಾಗಿ ಶ್ರಮಿಸುತ್ತಿದೆ ಅದರಲ್ಲಿ ಹೊಸದಾಗಿ ಉಗಾರ-ಮಂಗಸುಳಿ, ಈ ಮಾರ್ಗದಲ್ಲಿ ಅನೇಕ ಪ್ರಯಾಣಿಕರ ಬೇಡಿಕೆ ಗಮನದಲ್ಲಿ ತೆಗೆದುಕೊಂಡು ಪ್ರಾರಂಭಿಸಲಾಗಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.
ಸೋಮವಾರ ರಂದು ಉಗಾರ-ಮಂಗಸೂಳಿ ಮಾರ್ಗದಲ್ಲಿ ಪ್ರಾರಂಭಿಸಿದ್ದು ಇದರ ಪೂಜೆ ವಿಜಯಪುರ ಜ್ಞಾನಯೋಗ ಆಶ್ರಮದ ಬಸವಲಿಂಗ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ನೆರವೇರಿಸಿ ಚಾಲನೆ ನೀಡಲಾಯಿತು.
ಈ ಮಾರ್ಗದಲ್ಲಿ ಬೆಳಿಗ್ಗೆ ಅದರಿಂದ ಮಂಗಸುಳಿ ಮಾರ್ಗವಾಗಿ 9:00ಗೆ ಹೂಗಾರ ತಲುಪುಲಿದ್ದು ಈ ಮಾರ್ಗದಲ್ಲಿ ಐದು ಸುತ್ತು ಸೇವೆ ಸಂಚರಿಸಲಿದೆ ಇದರ ಲಾಭ ಪ್ರತಿಯೊಬ್ಬರು ತೆಗೆದುಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಹೇಳಿದರು.
ಪರಮ ಪೂಜ್ಯ ಬಸವಲಿಂಗ ಸ್ವಾಮೀಜಿ ಇವರು ಈ ಮಾರ್ಗದಲ್ಲಿ ಬಸ ಸೇವ ಕೊರತೆ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದ್ದರು ಇದನ್ನು ಗಮನಿಸಿ ಕೂಡಲೇ ಈ ಮಾರ್ಗದಲ್ಲಿ ಪ್ರಾರಂಭಿಸಿದ್ದಾರೆ ಇದರಿಂದ ಸ್ವಾಮೀಜಿಯವರು ಶಾಸಕರನ್ನು ಸಿದ್ದೇಶ್ವರ ಪ್ರತಿಮೆ ನೀಡಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನೇಶ್ವರ ಗಣ್ಯರಾದ ಸ್ವಾಮೀಜಿ ದಿಲೀಪ್ ಹುಲ್ಲೋಳಿ, ವೀರಭದ್ರ ಕಟಗೇರಿ ರಾಜೇಶ್ ದಾನೊಳ್ಳಿ ವಿನಾಯಕ್ ಕಾಂಬಳೆ ಸತ್ಯಪ್ಪ ಜಾಯಗೊಂಡೆ ಉದಯ್ ಪಾಟೀಲ್ ಅಮಿತ್ ಕಟಗೇರಿ ಸುರೇಶ್ ಕೋಳಿ ವಿಜಯ್ ಅಸುಧೆ ಬರ್ಮು ಮಾದರ ಬಸು ಸಾಂಗವೇ ರಸುಲ್ ನದಾಫ್ ಸ್ವಾತಿ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.

Spread the love

About Laxminews 24x7

Check Also

ರೈತರ ಸಾಲಕ್ಕಾಗಿ ರಾಜ್ಯಕ್ಕೆ ನೀಡುವ ಅನುದಾನ- ಕೇಂದ್ರದಿಂದ ತಾರತಮ್ಯ ಬೇಡ : ಶಾಸಕ ಲಕ್ಷ್ಮಣ ಸವದಿ

Spread the love ಉಗಾರಬುದ್ರುಕ್ ಸಹಕಾರಿ ಸಂಸ್ಥೆಯ ಶತಮಾನೋತ್ಸವ…. ರೈತರ ಸಾಲಕ್ಕಾಗಿ ರಾಜ್ಯಕ್ಕೆ ನೀಡುವ ಅನುದಾನ- ಕೇಂದ್ರದಿಂದ ತಾರತಮ್ಯ ಬೇಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ