ಬೆಂಗಳೂರು: ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಪ್ರತಿ ವರ್ಷದಂತೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಮೊದಲ ಮೂರು ಸ್ಥಾನಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕಾಮೇಗೌಡ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರೆ, 591 ಅಂಕ ಪಡೆದ ಸ್ವಾಮಿ ಎರಡನೇ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ ಈ ವರ್ಷ ಕಲಾ ವಿಭಾಗದ ಪರೀಕ್ಷೆಗೆ 1,98,875 ಮಂದಿ ಹಾಜರಾಗಿದ್ದು, 82,077 ಮಂದಿ ತೇರ್ಗಡೆಯಾಗುವ ಮೂಲಕ ಶೇ.41.27 ಫಲಿತಾಂಶ ದಾಖಲಾಗಿದೆ.
ಮೂರು ವಿಭಾಗದದಲ್ಲಿ ಹೊಸಬರು ಒಟ್ಟು 5,56,267 ಮಂದಿ ಪರೀಕ್ಷೆ ಬರೆದಿದ್ದು, 3,84,947 ಮಂದಿ ತೇರ್ಗಡೆಯಾಗಿದ್ದಾರೆ. ಶೇ.69.20 ಫಲಿತಾಂಶ ಬಂದಿದೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
1. ಕಾಮೇಗೌಡ 594 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
2. ಸ್ವಾಮಿ ಎಸ್.ಎಂ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
3. ಮಹಮ್ಮದ್ ರಫೀಕ್ ಹೆಚ್ 591 ಅಂಕ, ಇಂದು ಪಿಯು ಕಾಲೇಜು, ಬಳ್ಳಾರಿ
4. ಗೀತಾ ದೊಗ್ಗಳ್ಳಿ 590 ಅಂಕ, ಎಸ್‍ಯುಜೆಎಂ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
4. ಶಮೀನ್ 590 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
5. ಪ್ರಿಯಾಂಕ ಎಂ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
5. ಶರಣಬಸಪ್ಪಬಡಿಗೇರ್ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ
5. ಹಕ್ಕಿ ರೂಪ 589 ಅಂಕ, ಎಸ್‍ಎಸ್‍ಹೆಚ್ ಜೈನ್ ಪಿಯು ಕಾಲೇಜು ಹರಪ್ಪನಹಳ್ಳಿ ಬಳ್ಳಾರಿ
5. ತೋಟದ ತೇಜಸ್ವಿನಿ 589 ಅಂಕ, ಇಂದು ಪಿಯು ಕಾಲೇಜು ಬಳ್ಳಾರಿ