Breaking News

ಅಗಾಧ ನೆನಪಿನ ಶಕ್ತಿಯ ಭಂಡಾರ ಈ ಪುಟಾಣಿ

Spread the love

ಮಂಡ್ಯ (ಡಿ. 17): ಆ ಬಾಲಕಿಗಿನ್ನು ಬರೀ 2 ವರ್ಷ 8 ತಿಂಗಳು. ಮುದ್ದು ಮುದ್ದಾಗಿ ತೊದಲು‌ ಮಾತನಾಡುವ ವಯಸ್ಸಿನ ಈ ಪೋರಿಯ ಸಾಧನೆ ಮಾತ್ರ ಅಗಾಧ.  ಈ ಪೋರಿಯ  ಅಸಾಧಾರಣ ನೆನಪಿನ ಶಕ್ತಿ ಎಲ್ಲರನ್ನು ಬೆರಗು ಮೂಡಿಸುತ್ತದೆ.  ಇದರಿಂದಾಗಿಯೇ ಈಗ ಈಕೆ  ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ. ಅಲ್ಲದೇ ತನ್ನ ಅಸಾಧಾರಣ ಪ್ರತಿಭೆಯಿಂದ ಇದೀಗ ಗಿನ್ನಿಸ್ ದಾಖಲೆ ಬರೆಯಲು ಹೊರಟಿದ್ದಾಳೆ. ಈ ಬಾಲಕಿ ಹೆಸರ  ಮೌಲ್ಯ. ತಾಲೂಕಿನ ಬಸರಾಳು ಗ್ರಾಮದ ತೋಂಟೇಸ್ ರವರ ಮೊಮ್ಮಗಳು. ಈ ಪುಟಾಣಿ ಪೋರಿಯ ವಯಸ್ಸಿನ ಮಕ್ಕಳು ತೊದಲು ಕಲಿಕೆ ಶುರು ಮಾಡಿದ್ದರೆ, ಈಕೆ ವಿಶ್ವದ  32 ರಾಷ್ಟ್ರದ ಹೆಸರು, ಅವುಗಳ ರಾಜಧಾನಿ, ಅಲ್ಲಿನ ಪ್ರಸಿದ್ದಿ ಬಗ್ಗೆ,  ಸೌರವ್ಯೂಹದ ಗ್ರಹಗಳು, ಕನ್ನಡ ಇಂಗ್ಲಿಷ್ ವರ್ಣಮಾಲೆ, ಪದಗಳ ರಚನೆ, ಹಣ್ಣುಗಳು, ಪುಷ್ಪಗಳು, ಸಂಖ್ಯೆ ಪ್ರಕೃತಿಯ ವಸ್ತುಗಳ ಹೆಸರು. ದೇಶದ ರಾಜ್ಯಗಳು, ರಾಜಧಾನಿ, ಸೇವಕರ ಹೆಸರು, ಋತುಗಳು, ವಿಜ್ಞಾನಿಗಳ ಹೆಸರು, ಅವರು ಅನ್ವೇಷಣೆ, ರಾಷ್ಟ್ರೀಯ ಪ್ರಾಣಿ, ಪುಷ್ಪ, ಲಾಂಚನ ಯಾವುದನ್ನೇ ಕೇಳಿದ್ರು ಥಟ್ ಅಂತಾ ಉತ್ತರ ಹೇಳಿ ಎಲ್ಲರನ್ನು ನಿಬ್ಬೇರಗಾಗಿಸುತ್ತಾಳೆ.

ಈ ಪುಟಾಣಿ ಪೋರಿಯ ಈ ಅಸಾಧಾರಣ ಪ್ರತಿಭೆ ಕಂಡು  ಅವರ ಕುಟುಂಬದವರು ಸಂತಸ ವ್ಯಕ್ತ ಪಡಿಸಿದರೆ, ಊರಿನವರು ಈ ಬಾಲಕಿಯ ಪ್ರತಿಭೆ ಕಂಡು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಸದಾ ಒಂದಲ್ಲ ಒಂದು ವಸ್ತುಗಳ ಬಗ್ಗೆ ಸದಾ ಕುತೂಹಲ ಹೊಂದಿರುವ ಈ ಪುಟಾಣಿ  ಕ್ರಿಯಾಶೀಲತೆಯಿಂದ ಎಲ್ಲವನ್ನು ಕಲಿಯುವ ಉತ್ಸಾಹ ತೋರುತ್ತಾಳಂತೆ. ಏನೇ ಹೇಳಿಕೊಟ್ಟರು ಅದು ಮನಸ್ಸಿನಲ್ಲಿ ಅಚ್ಚೊತ್ತಿದ್ದಂತೆ ಸದಾ ಕಾಲ ಮನಸ್ಸಿನಲ್ಲಿರುತ್ತದೆ. ಅಲ್ಲದೇ ಆಕೆ ಕೂಡ ಕಲಿಯುವ ಹುಮ್ಮಸ್ಸು ತೋರುವುದು   ಮನೆಯವರ ಸಂತಸಕ್ಕೆ ಕಾರಣವಾಗಿದೆ. ಈಗ ಈಕೆಯ ಅಗಾದ ಉತ್ಸಾಹ ಕಂಡು ಮತ್ತಷ್ಟು ತರಬೇತಿಯ ಮೂಲಕ ‌ ಮತ್ತಷ್ಟು ಚುರುಕುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಪೋಷಕರು.ಅಲ್ಲದೇ ಮುಂದಿನ ದಿನಗಳಲ್ಲಿ ಈಕೆಯ ಸಾಧನೆಯನ್ನು ಗಿನ್ನಿಸ್​ ಬುಕ್​ ದಾಖಲೆಯಲ್ಲಿ ದಾಖಲಿಸಲು ಪೋಷಕರು ಇಚ್ಛೆ ವ್ಯಕ್ತಪಡಿಸಿದ್ದಾರೆ. ನಮ್ಮಿಂದ ಯಾವುದೇ ಒತ್ತಾಯವಿಲ್ಲದೇ, ಮಗಳೇ ಇದರ ಕಲಿಕೆಗೆ ಮುಂದಾಗಿದ್ದಾಳೆ ಇದು ನಮ್ಮಲ್ಲಿ ಕೂಡ ಸಂತಸ ತಂದಿದೆ ಎನ್ನುತ್ತಾರೆ.

ಒಟ್ಟಾರೆ ಸಕ್ಕರೆನಾಡಿನ ಈ ಪುಟಾಣಿ  ಪೋರಿಯ ಈ ಅಸಾಧಾರಣ ಪ್ರತಿಭೆ ಜನರು ಕೂಡ ಅಚ್ಚರಿ ಜೊತೆ ಪ್ರಶಂಸೆ ಮಳೆ ಸುರಿಸಿದ್ದಾರೆ. ಈ ಪುಟಾಣಿ  ಕೀರ್ತಿ ಮತ್ತಷ್ಟು ಹೆಚ್ಚಿಲಿ ಎಂದು ಹಾರೈಸಿದ್ದಾರೆ.


Spread the love

About Laxminews 24x7

Check Also

ಆಯುಧ ಪೂಜೆಗೆ ಕೇವಲ 50 ರೂ. ಕೊಟ್ಟ ರಾಜ್ಯ ಸರ್ಕಾರ..!

Spread the love ಮಂಡ್ಯ : ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ