Breaking News

I PL ಫೈನಲ್ ಮೇನಿಯಾ: ದುಬಾರಿಕಾರಿಗೆ ವಿಶೇಷ ಅಲಂಕಾರ ಮಾಡಿದ ಆರ್‌ಸಿಬಿ ಫ್ಯಾನ್ಸ್‌

Spread the love

ಮೈಸೂರು: ಐಪಿಎಲ್ ಫೈನಲ್ ಗೆಲ್ಲಲು ಪಂಜಾಬ್​ ಕಿಂಗ್ಸ್ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಸೆಣಸಲಿವೆ. ಅಂತಿಮ ಘಟ್ಟದಲ್ಲಿ ಬೆಂಗಳೂರು ತಂಡ ಗೆಲುವು ಸಾಧಿಸಲೆಂದು ಮೈಸೂರಿನ ಉದ್ಯಮಿಯೊಬ್ಬರು ತಮ್ಮ ದುಬಾರಿ ಬೆಲೆಯ ಕಾರಿಗೆ RCB ತಂಡದ ಆಟಗಾರರ ಪೋಸ್ಟರ್‌ಗಳನ್ನು ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ RCB ತಂಡ ಪಂಜಾಬ್​ ಕಿಂಗ್ಸ್ ವಿರುದ್ಧ ಗೆಲ್ಲಲೆಂದು ಚಾಮುಂಡಿ ಬೆಟ್ಟಕ್ಕೆ ಹೋಗಿ ನಾಡಿನ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಈ ಕಾರು ಬೆಂಗಳೂರಿಗೆ ಹೊರಟಿತು.ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್‌ಮೆಡ್​ನಲ್ಲಿ ದೀಪಕ್, ಶ್ರೇಯಸ್ ಹಾಗೂ ಪ್ರಣೀತ್ ಎಂಬವರು ವಿಶೇಷ ಕಾರನ್ನು ಸಿದ್ಧಪಡಿಸಿದ್ದು, ಕಾರಿನ ತುಂಬೆಲ್ಲ ಆರ್​ಸಿಬಿ ಆಟಗಾರರ ಸ್ಟಿಕ್ಕರ್ ಅಂಟಿಸಿದ್ದನ್ನು ಕಂಡು ಸಾಂಸ್ಕೃತಿಕ ನಗರಿಯಲ್ಲಿ ಆರ್​ಸಿಬಿ ಜೋಶ್ ಮುಗಿಲು ಮುಟ್ಟಿತ್ತು.

ಕಾರಿನ ಮುಂಭಾಗ ಕನ್ನಡದಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ಹೆಸರು ಬರೆಸಿದ ಅಭಿಮಾನಿಗಳು, ಒಂದು ಬದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರ ಸ್ಟಿಕ್ಕರ್ ಅಂಟಿಸಿದ್ದಾರೆ. ಮತ್ತೊಂದು ಬದಿ ಐಪಿಎಲ್ ಟ್ರೋಪಿ ಗೆದ್ದ ಮಹಿಳಾ ತಂಡದ ಸ್ಟಿಕ್ಕರ್ ಅಂಟಿಸಿದ್ದಾರೆ.

“ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್‌ಮೆಡ್​ನಲ್ಲಿ ಈ ಕಾರನ್ನು ವಿಶೇಷವಾಗಿ ಸಿದ್ದಪಡಿಸಲಾಗಿದ್ದು, ಚಾಮುಂಡಿ ಬೆಟ್ಟಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದೇವೆ. ತಂಡದ ಗೆಲುವಿಗಾಗಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ಕಾರಿನಲ್ಲಿ ಸಂಚರಿಸಿ ಅಭಿಮಾನಿಗಳಲ್ಲಿ ಜೋಶ್ ತುಂಬುತ್ತೇವೆ” ಎಂದು ದೀಪಕ್, ಶ್ರೇಯಸ್ ಹಾಗೂ ಪ್ರಣೀತ್ ಹೇಳಿದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ