Breaking News

ಕಮಲ್ ಹಾಸನ್ ವಿವಾದಿತ ಹೇಳಿಕೆ: ಬೂಕರ್ ಪುರಸ್ಕೃತೆ ಬಾನು ಮುಷ್ತಾಕ್, ದೀಪಾ ಭಾಸ್ತಿ ಹೇಳುವುದೇನು?

Spread the love

ಬೆಂಗಳೂರು: ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ, ಒಂದು ಬೂಕರ್ ಪ್ರಶಸ್ತಿ ಸಿಕ್ಕಿದೆ. ಅದೇ ಅದಕ್ಕೆ ಉತ್ತರ ಎಂದು ಕಮಲ್ ಹಾಸನ್ ಹೇಳಿಕೆಗೆ ಬಾನು ಮುಷ್ತಾಕ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೂಕರ್ ಪ್ರಶಸ್ತಿ ನನ್ನೊಬ್ಬಳಿಗೆ ಸಿಕ್ಕಿದ್ದು ಅಲ್ಲ, ಕನ್ನಡಕ್ಕೆ ಮತ್ತು ಕನ್ನಡದ ಜನತೆಗೆ ಸಿಕ್ಕಿದೆ. ಸರ್ಕಾರ ಅದಕ್ಕೆ ಅಭಿನಂದನೆ ಸಲ್ಲಿಸಿದೆ.‌ ಕಮಲ್ ಹಾಸನ್ ಹೇಳಿಕೆ ಸಂಬಂಧ ನಾನು ಉತ್ತರ ಹೇಳಿದ್ದೇನೆ. ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ, ಒಂದು ಬೂಕರ್ ಪ್ರಶಸ್ತಿ ಸಿಕ್ಕಿದೆ. ಅದೇ ಅದಕ್ಕೆ ಉತ್ತರ ಎಂದು ತಿಳಿಸಿದರು.

ಅವರವರ ಭಾಷೆ ಅವರಿಗೆ ಮುಖ್ಯ: ಕಮಲ್ ಹಾಸನ್ ವಿವಾದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕಮಲ್ ಹಾಸನ್ ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅವರವರ ಬಾಷೆ ಅವರಿಗೆ ಮುಖ್ಯ. ನನ್ನ ಭಾಷೆ ಕನ್ನಡ, ನನಗೆ ಕನ್ನಡ ಮುಖ್ಯ. ಅವರಿಗೆ ತಮಿಳು ಮುಖ್ಯ ಆಗಿರಬಹುದು. ಇದು ಅನಾವಶ್ಯಕ ಚರ್ಚೆ ಅನ್ನಿಸುತ್ತದೆ. ಭಾಷೆಯ ವಯಸ್ಸಿನ ಮೇಲೆ ಮಾನ್ಯತೆ ನೀಡೋದು ಸರಿಯಲ್ಲ ಎಂದು ದೀಪಾ ಭಾಸ್ತಿ ತಿಳಿಸಿದರು.

ಇದು ಹಳೇದು ಹೊಸದು ಅಂತ ಹೇಳೋದು ಚರ್ಚೆ ಅಲ್ಲ. ಎಲ್ಲಾ ಭಾಷೆಗಳು ಒಂದೇ, ಅದಕ್ಕೆ ಸ್ಟೇಟಸ್ ಇರುತ್ತದೆ. ಇದರಲ್ಲಿ ಯಾವುದೇ ಚರ್ಚೆ ಬೇಡ. ಒಂದು ಭಾಷೆಯ ವಯಸ್ಸು ಇಟ್ಕೊಂಡು ಮಾತಾಡಬಾರದು. ಭಾಷೆಗೆ ಅದರ ಇತಿಹಾಸ ಇಟ್ಕೊಂಡು ಹೇಳೋದು ಸರಿಯಿಲ್ಲ. ನಾನು ಕನ್ನಡದವಳು, ನನಗೆ ಕನ್ನಡ ಮುಖ್ಯ, ಅವರಿಗೆ ತಮಿಳು ಮುಖ್ಯ. ಇದು ಅನಗತ್ಯ ಚರ್ಚೆ ಅಂತ ಹೇಳುತ್ತೇನೆ ಎಂದರು.‌

ಮೋದಿ ಅಭಿನಂದನೆ ಸಲ್ಲಿಸದ ವಿಚಾರ ಸಾಹಿತ್ಯ ವಲಯದಲ್ಲಿ ಟೀಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಜನ ಓದುತ್ತಿದ್ದಾರೆ, ಅವರಿಗೆ ಅವರದ್ದೇ ನಿಲುವು ಇದ್ದಿರಬಹುದು. ಆದ್ರೆ ನಾವು ಬರೆದಾಗ ಬೂಕರ್ ಪ್ರಶಸ್ತಿ ಸಿಗುತ್ತೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಾನು ನ್ಯೂಸ್ ನೋಡಿಲ್ಲ, ಯಾರು ಏನು ಹೇಳಿದ್ದಾರೆ, ಹೇಳಿಲ್ಲ ಅಂತ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ