Breaking News

ಬಾಗಲಕೋಟೆ ಜಿಲ್ಲೆಯಲ್ಲಿ ಬಿತ್ತನೆ ಆರಂಭದಲ್ಲಿ ರೈತರಿಗೆ ಬಿಗ್ ಶಾಕ್ !

Spread the love

ಬಾಗಲಕೋಟೆ ಜಿಲ್ಲೆಯಲ್ಲಿ ಬಿತ್ತನೆ ಆರಂಭದಲ್ಲಿ ರೈತರಿಗೆ ಬಿಗ್ ಶಾಕ್ !
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನಕಲಿ ಗೊಬ್ಬರ ಸರಬರಾಜು ಮಾಡೋ ಜಾಲ..!!
ಬಾಗಲಕೋಟೆ ತಾಲ್ಲೂಕಿನ ‌ಸೀಮಿಕೇರಿ ಗ್ರಾಮದಲ್ಲಿ ನಕಲಿ ರಸಗೊಬ್ಬರ ಮಾರಾಟದ ಶಂಕೆ ವ್ಯಕ್ತವಾಗಿದೆ.
ಬಾಗಲಕೋಟೆ ತಾಲ್ಲೂಕಿನ ‌ಸೀಮಿಕೇರಿ ಗ್ರಾಮದ ಗುರು ಫರ್ಟಿಲೈಜರ್ನ ಗೋದಾಮಿನಲ್ಲಿ ಗೊಬ್ಬರವನ್ನು ಇಳಿಸಲು ಬಂದಿದ್ದ ಲಾರಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕಪ್ಪು ಬಣ್ಣದ‌, ಹಿಸುಕಿದರೆ
ಬೂದಿಯಾಗುವ ನಕಲಿ ಡಿಎಪಿ ಪತ್ತೆಯಾಗಿದೆ. ಈ ನಕಲಿ ಗೊಬ್ಬರವನ್ನು ಓರಿಜಿನಲ್‌ ಮಾದರಿ ಚೀಲ ತಯಾರಿಸಿ ಅದರಲ್ಲಿ ಹಾಕಿ ಮಾರಾಟ ಮಾಡುವ ಹುನ್ನಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ನಕಲಿ ಗೊಬ್ಬರ ಬಗ್ಗೆ ಕಲಾದಗಿ ಠಾಣೆಯಲ್ಲಿ ಕೃಷಿ ಅಧಿಕಾರಿಗಳು ಎಫ್ ಐ ಆರ್ ದಾಖಲು ಮಾಡಿದ್ದಾರೆ. ೫೦ ಕೆಜಿಯ ೨೪೦ ಚೀಲ ನಕಲಿ ಗೊಬ್ಬರ ತುಂಬಿದ್ದ ಲಾರಿಯನ್ನು ಜಪ್ತಿ ಮಾಡಲಾಗಿದೆ. ಸೀಮಿಕೇರಿಯ ನರೇಂದ್ರ ‌ಎಂಬುವವರಿಗೆ ನಕಲಿ ಗೊಬ್ಬರ ನೀಡಲು ಮುಂದಾಗಿದ್ದಾರೆ. ಪುಣೆಯಲ್ಲಿ ಇದನ್ನು ತಯಾರಿಸಿ ಪಂಢರಪುರದಲ್ಲಿ ಪ್ಯಾಕಿಂಗ್ ಮಾಡಲಾಗಿದೆ.
ಅನ್ಲೋಡ್ ಮಾಡುವ ವಿಳಾಸ ಕೂಡ ಮಹಾರಾಷ್ಟ್ರದ ಕಾಸೆಗಾಂವ್ ಎಂದು ಪತ್ತೆಯಾಗಿದೆ. ಆದರೆ ಲಾರಿ ಬಂದಿದ್ದು ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಗ್ರಾಮಕ್ಕೆ.ಚಾಲಕ ನೀಡಿದ ಇನ್ವೈಸ್ ಕಾಫಿಯಲ್ಲಿ ಮಹಾರಾಷ್ಟ್ರದ ವಿಳಾಸ ಮಾತ್ರ ಉಲ್ಲೇಖವಿದೆ.

Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ