ಬೆಂಗಳೂರು, ಮೇ 31: ನಗರದಲ್ಲಿ ಅಮೃತಹಳ್ಳಿಯ ರಾಯಲ್ ಸಲೂನ್ ಮತ್ತು ಸ್ಪಾಗೆ ಎಂಟ್ರಿ ಕೊಟ್ಟಿದ್ದ ಲೇಡಿ ಡಾನ್ ಗ್ಯಾಂಗ್ (Lady Don Gang) ಮಾಲೀಕ ಸಂಜು ಮೇಲೆ ದಾಳಿ (attack) ಮಾಡಿದ್ದರು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತ ಮೂವರಲ್ಲಿ ಕಾವ್ಯಗೆ ರೌಡಿಸಂ ಲಿಂಕ್ ಇದೆ. ಹೇಗೆ ಅಂದರೆ ಬೆಂಗಳೂರಿನ ರೌಡಿಶೀಟರ್ ಮುನಿಕೃಷ್ಣ ಅಲಿಯಾಸ್ ಅಮೃತಹಳ್ಳಿ ಕಪ್ಪೆ ಪ್ರಿಯತಮೆ ಈ ಕಾವ್ಯ. ತನ್ನ ರೌಡಿ ಲವರ್ ಕಪ್ಪೆ ಹೆಸರನ್ನ ಬಳಸಿಕೊಂಡು ಏರಿಯಾದಲ್ಲಿ ಕಾವ್ಯ ಫುಲ್ ಹವಾ ಮೈಂಟೇನ್ ಮಾಡಿದ್ದಳು.
ಸದ್ಯ ಕಪ್ಪೆ ಗೂಂಡಾ ಕಾಯ್ದೆಯಡಿ ಬಂಧನವಾಗಿ ಕಲಬುರಗಿ ಜೈಲಲ್ಲಿದ್ದಾನೆ. ಈ ಹಿಂದೆ ಕಪ್ಪೆ ಬೆಂಗಳೂರಿನಿಂದ ಗಡಿಪಾರು ಆಗಿದ್ದ. ಅತ್ತ ಲವರ್ ಜೈಲಿನಲ್ಲಿದ್ದರೆ ಇತ್ತ ಕಾವ್ಯ ಸ್ನೇಹಿತೆ ಸ್ಮಿತಾ ಜೊತೆ ಸ್ಪಾ ನಲ್ಲಿ ಕೆಲಸ ಮಾಡಿತ್ತಿದ್ದಳು.ನಿನ್ನೆ ಅಮೃತಹಳ್ಳಿ ರಾಯಲ್ ಲೈಫ್ ಸ್ಪಾಗೆ ಎಂಟ್ರಿ ಕೊಟ್ಟಿದ್ದ ಕಾವ್ಯ ಆ್ಯಂಡ್ ಗ್ಯಾಂಗ್ ಸಿಗರೇಟ್ ಸೇದುತ್ತಾ ಹಲ್ಲೆ ಮಾಡಿ ಅವಾಜ್ ಬಿಟ್ಟಿದ್ದಳು. ಹಲ್ಲೆ ಮಾಡಿದ್ದಲ್ಲದೇ ಕಾರಲ್ಲಿ ಸಂಜುನನ್ನು ಕಿಡ್ನಾಪ್ ಮಾಡಿ ಅಮೃತಹಳ್ಳಿ ಪೂರ್ತಿ ಸುತ್ತಾಡಿಸಿ ಹಲ್ಲೆ ಮಾಡಿದ್ದಳು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯ ಕೂಡ ಜೈಲುಪಾಲಾಗಿದ್ದಾಳೆ.