ಬೆಂಗಳೂರು, ಮೇ 28: ಪ್ರತಿ ತಾಲೂಕಿನಲ್ಲೂ ಖರೀದಿ ಕೇಂದ್ರ ಸ್ಥಾಪಿಸಲು ಕರ್ನಾಟಕ ಹೈಕೋರ್ಟ್ (High Court) ಬುಧವಾರ ಆದೇಶ ಹೊರಡಿಸಿದೆ.
ರೈತ ಸೇನೆ ಸಲ್ಲಿಸಿದ್ದ ಪಿಐಎಲ್ ಅರ್ಜಿ (PIL application) ವಿಚಾರಣೆ ಮಾಡಿದ ಹೈಕೋಟ್, ಕನಿಷ್ಟ ಬೆಂಬಲ ಬೆಲೆಯ ಖರೀದಿ ಕೇಂದ್ರ ಆರಂಭಿಸಲು ಸಿಜೆ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಕೆ.ವಿ.ಅರವಿಂದ್ರಿದ್ದ ಪೀಠ ಆದೇಶ ನೀಡಿದೆ.ಜಿಲ್ಲಾಧಿಕಾರಿ ಬೆಳೆಗಳ ಲಭ್ಯತೆಯ ವೈಜ್ಞಾನಿಕ ಅಧ್ಯಯನ ನಡೆಸಬೇಕು.
ಅಗತ್ಯವಿದ್ದಷ್ಟು ಕನಿಷ್ಟ ಬೆಂಬಲ ಬೆಲೆಯ ಖರೀದಿ ಕೇಂದ್ರ ಸ್ಥಾಪಿಸಬೇಕು. ಪ್ರತಿ ತಾಲೂಕಿನಲ್ಲೂ ಒಂದು ಖರೀದಿ ಕೇಂದ್ರ ಸ್ಥಾಪಿಸಬೇಕು. ನಿಗದಿತ ಅವಧಿಗಿಂತ ಕನಿಷ್ಟ 2 ತಿಂಗಳು ಖರೀದಿ ಕೇಂದ್ರದ ಅವಧಿ ವಿಸ್ತರಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.
Laxmi News 24×7