ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕಥಾ ಸಂಕಲನ ಇತ್ತೀಚೆಗೆ ಬೂಕರ್ ಪ್ರಶಸ್ತಿ ಪಡೆದಿದೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿಗೆ ಈ ಗೌರವ ಸಂದಿದೆ. ದೀಪಾ ಭಾಸ್ತಿ ಅವರು ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು.
ಕನ್ನಡ ಕಸ್ತೂರಿ ಕಂಪು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಸರಿಸಿದ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಲಂಡನ್ನಲ್ಲಿ ಪ್ರಶಸ್ತಿ ಸ್ವೀಕರಿಸಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಾನು ಮುಷ್ತಾಕ್, “ಕನ್ನಡದ ಸಂಭ್ರಮವನ್ನು ಲಂಡನ್ನಲ್ಲಿ ಮುಗಿಸಿಕೊಂಡು ಕನ್ನಡ ನಾಡಿನಲ್ಲೂ ಆಚರಿಸಲು ಇಂದು ಬೆಂಗಳೂರಿಗೆ ಬಂದಿದ್ದೇನೆ. ಲಂಡನ್ನಲ್ಲಿ ಕನ್ನಡ ವಿರಾಜಮಾನವಾಯ್ತು, ಜಾಗತಿಕ ಮಟ್ಟದಲ್ಲಿ ಕನ್ನಡವನ್ನು ಪ್ರತಿನಿಧಿಸಿದೆವು. ಇದು ನಮಗೆ ವಿಶಿಷ್ಟ ಅನುಭವಾಯಿತು” ಎಂದರು.
Laxmi News 24×7