Breaking News

ಕನ್ನಡದಲ್ಲಿ ಮಾಹಿತಿ ಕೊಡದ ಇಂಡಿಗೊ ಏರ್‌ಲೈನ್ಸ್ ವಿರುದ್ಧ ಹಿರಿಯ ಐಎಎಸ್ ಅಧಿಕಾರಿ, ಅಸಮಾಧಾನ

Spread the love

ಬೆಳಗಾವಿ: ಕನ್ನಡದಲ್ಲಿ ಮಾಹಿತಿ ಕೊಡದ ಇಂಡಿಗೊ ಏರ್‌ಲೈನ್ಸ್ ವಿರುದ್ಧ ಹಿರಿಯ ಐಎಎಸ್ ಅಧಿಕಾರಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಎಲ್.ಕೆ.ಅತೀಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆ ವಿಮಾನದಲ್ಲಿ ಬುಧವಾರ ಬೆಂಗಳೂರಿನಿಂದ ಇಲ್ಲಿನ ಸಾಂಬ್ರಾಗೆ ಬಂದಿಳಿದ ಅವರು, ‘ಕರ್ನಾಟಕದಲ್ಲಿ ಇಂಡಿಗೊ ಹಾಗೂ ಇತರ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಇರುವ ಸಮಸ್ಯೆಯಾದರೂ ಏನು?’ ಎಂದು ಟ್ವೀಟ್ ಮಾಡುವ ಮೂಲಕ ಕೇಳಿದ್ದಾರೆ. ಈ ಅಧಿಕಾರಿಯ ಪ್ರಶ್ನೆಗೆ ಟ್ವಿಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದು, ಕನ್ನಡ ನೆಲದಲ್ಲೇ ಕನ್ನಡ ಬಳಸದಿರುವುದಕ್ಕೆ ವಿಮಾನಯಾನ ಕಂಪನಿಗಳ ವಿರುದ್ಧ ಆಕ್ರೋಶ ಪ್ರಕಟಿಸಿದ್ದಾರೆ.

‘ವಿದೇಶಿ ವಿಮಾನಯಾನ ಸಂಸ್ಥೆಗಳಾದ ಬ್ರಿಟಿಷ್ ಏರ್‌ವೇಸ್ ಎಮಿರೇಟ್ಸ್, ಸಿಂಗಾಪುರ್ ಏರ್‌ಲೈನ್ಸ್ ಕನ್ನಡದಲ್ಲಿ ಸೇವೆ ನೀಡುತ್ತವೆ. ಇಂಡಿಗೊ ಸಿಬ್ಬಂದಿ ಕ್ಯಾಬಿನ್ ಸಿಬ್ಬಂದಿಯು ಇಂಗ್ಲಿಷ್, ಹಿಂದಿ ಹಾಗೂ ಮಲಯಾಳಂ ಬಳಸುವುದಾದರೆ, ಕನ್ನಡದಲ್ಲಿ ಸೇವೆ ನೀಡದಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ಅತೀಕ್‌ ಮತ್ತೊಂದು ಟ್ವೀಟ್‌ನಲ್ಲಿ ಕೇಳಿದ್ದಾರೆ. ಕನ್ನಡದಲ್ಲೂ ಟ್ವೀಟ್ ಮಾಡಿದ್ದಾರೆ.

 


Spread the love

About Laxminews 24x7

Check Also

ಮೇಶ್ ಜಾರಕಿಹೊಳಿ ವಿರುದ್ಧ ಸುಳ್ಳು ಸುದ್ದಿ: ₹20 ಕೋಟಿ ಮಾನನಷ್ಟ ಕೇಸ್‌

Spread the loveಬೆಳಗಾವಿ: ಅಸ್ತಿತ್ವದಲ್ಲಿ ಇಲ್ಲದ ಖಾಸಗಿ ಮಾಧ್ಯಮದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಅಪಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ