ಧಾರವಾಡದ ನವಲೂರು ಬಳಿ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆ ಮೇಲೆ ಸರಣಿ ಅಪಘಾತ, ತಪ್ಪಿದ ಅನಾಹುತ…… ಎರಡು ಕಾರ್‌ಗಳ ಮುಂಭಾಗ ಜಖಂ.
ಮುಂದೆ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿಕೊಂಡು ಹೊರಟ್ಟಿದವನ ತಪ್ಪಿಸಲು ಹೋಗಿ ಗೂಡ್ಸ್ ವಾಹನ ಚಾಲಕ ಏಕಾಎಕಿ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ನಡೆದ ಘಟನೆ ಧಾರವಾಡದ ನವಲೂರು ಬಳಿಯ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆಯ ಮೇಲೆ ನಡೆದಿದೆ.
ಧಾರವಾಡದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದ ಹೆಚ್ ಡಿ ಬಿಆರ್‌ಟಿಎಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಗೂಡ್ಸ್ ವಾಹನ ಹಾಗೂ ಎರಡು ಕಾರಗಳು ಧಾರವಾಡದಿಂದ ಹುಬಗಬಳ್ಳಿಯ ಕಡೆ ತೆರಳುತ್ತಿದ್ದವು. ಗೂಡ್ಸ್ ವಾಹನ ಚಾಲಕ ಮೊಬೈಲನಲ್ಲಿ ಮಾತನಾಡುತ್ತಾ ಹೊರಟ್ಟಿದ ಬೈಕ ಸವಾರನ ತಪ್ಪಿಸಲು ಹೋಗಿ ಏಕಾಎಕಿ ಸಡನಾಗಿ ಬ್ರೇಕ್ ಹಾಕಿದ್ದಾನೆ.
ಇದರಿಂದಾಗಿ ಹಿಂಬದಿಯಿಂದ ಬರುತ್ತಿದ್ದ ಕಾರಗಳು ಒಂದಕೊಂದು ಡಿಕ್ಕಿಯಾಗಿವೆ.
ಘಟನೆಯಿಂದಾಗಿ ಎರಡು ಕಾರಗಳ ಮುಂಭಾಗ ಜಖಂಗೊಂಡಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೂ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲವೆಂದು ತಿಳಿದು ಬಂದಿದೆ.




