ರಾಯಚೂರು : ದೇಶದೊಳಗೆ ನುಸುಳುಕೋರರು ಬರುತ್ತಿರುವುದರ ಕುರಿತಂತೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅದರ ಮಾಹಿತಿ ಸಂಗ್ರಹಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಮಾಜಿ ಸಚಿವ ಕುಮಾರಬಂಗಾರಪ್ಪ ಹೇಳಿದ್ದಾರೆ.
ಮಾಜಿ ಸಂಸದ ಬಿ. ವಿ. ನಾಯಕ ಅವರ ನಿವಾಸದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಪರ ಭಾಷೆ ನಟಿ ತಮನ್ನಾ ಆಯ್ಕೆ ಮಾಡಿರುವ ವಿಚಾರ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಹ ಒಬ್ಬ ಕಲಾವಿದ. ಕಾಂಟ್ರಾಕ್ಟರ್ ಯಾರು ಕರೆದಿದ್ದಾರೋ ಅವರಿಗೆ ಹೋಗುವಂತಹ ಕೆಲಸವನ್ನು ಅವರು ಮಾಡಿರಬಹುದು.
ಕನ್ನಡಿಗರಿಗೆ ಕೊಟ್ಟಿದ್ದರೆ ಒಳ್ಳೆಯದಿತ್ತು ಅನ್ನೋದು ನನ್ನ ಭಾವನೆ. ರಾಜ್ಯದಲ್ಲಿ ಒಳ್ಳೆ ಕಲಾವಿದರು ಇದ್ದರು. ತಮನ್ನಾಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಫಾಲೋವಿಂಗ್ ಜಾಸ್ತಿ ಅಂತ ಸಚಿವರು ಹೇಳಿದ್ದಾರೆ. ಕನ್ನಡಿಗರಿಗೆ ಅವಕಾಶ ತಪ್ಪುತ್ತೆ. ಕನ್ನಡಿಗ ನಟಿಯರಾದ ದೀಪಿಕಾ ಪಡುಕೋಣೆ, ರಶ್ಮಿಕಾ ಸೇರಿದಂತೆ ಅನೇಕ ಜನ ಇದ್ದರು. ಅವರಿಗೆ ನೀಡಿದ್ರೆ ಕನ್ನಡಿಗರಿಗೆ ಸಂತೋಷ ಆಗುತ್ತಿತ್ತು ಎಂದು ಹೇಳಿದರು.ಮೈಸೂರು ಸ್ಯಾಂಡಲ್ ಸೋಪ್ ಒಂದು ನ್ಯಾಶನಲ್ ಲೆವೆಲ್ಗೆ ಹೋಗಿ, ಮತ್ತೊಂದು ರಾಜ್ಯದ ಹೆಣ್ಣುಮಕ್ಕಳು, ಕಲಾವಿದರು ಬಂದು ಅದಕ್ಕೆ ಪ್ರಾಜೆಕ್ಟ್ ಮಾಡ್ತಾರೆ ಅಂದ್ರೆ, ಅದರಿಂದ ಮೈಸೂರು ಸ್ಯಾಂಡಲ್ಗೆ ಲಾಭ ಆಗುತ್ತೆ ಅಂದ್ರೆ, ಅದು ದೊಡ್ಡ ಇಸ್ಯು ಅಲ್ಲ ಎಂದು ಅಭಿಪ್ರಾಯಪಟ್ಟರು.