Breaking News

ಮೂರು ವರ್ಷದ ಬಾಲಕನ ಕೊಲೆ, ಮಲತಂದೆ ಸೇರಿ ನಾಲ್ವರು ವಶಕ್ಕೆ

Spread the love

ಬೆಳಗಾವಿ: ಮಲತಂದೆ ಮತ್ತು ಆತನ ಸ್ನೇಹಿತರು ಸೇರಿ ಮೂರು ವರ್ಷದ ಬಾಲಕನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ.

ಬಿಹಾರ ಮೂಲದ ಕಾರ್ತಿಕ್​ ಮುಖೇಶ್​ ಮಾಂಜಿ(3) ಕೊಲೆಯಾದ ಬಾಲಕ. ಆತನ‌ ಮಲತಂದೆ ಮಹೇಶ್ವರ ಮಾಂಜಿ ಕೊಲೆ ಮಾಡಿದ ಆರೋಪಿ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಮುರಗೋಡ ಸಿಪಿಐ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್​ ಗುಳೇದ ಅವರು ಮಾತನಾಡಿ, “ಇದು ಹೃದಯ ವಿದ್ರಾವಕ ಘಟನೆ. ಮೂರು ವರ್ಷದ ಬಾಲಕನನ್ನು ಮಲ ತಂದೆ ಮತ್ತು ಆತನ ಸಂಗಡಿಗರು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಬಾಲಕನ ತಾಯಿ ರಂಗೀಲಾ ದೂರು ಕೊಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡು, ಕೊಲೆಯಾದ ಬಾಲಕನ ಮಲ‌ತಂದೆ ಮಹೇಶ್ವರ ಮಾಂಜಿ ಮತ್ತು ಆತನ ಸ್ನೇಹಿತರಾದ ರಾಕೇಶ ಮಾಂಜಿ, ಶಿವನಾಥ ಮಾಂಜಿ, ಮಹೇಶ ಮಾಂಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದೇವೆ” ಎಂದರು.”ಮೊದಲ ಗಂಡನನ್ನು ಬಿಟ್ಟಿದ್ದ ರಂಗೀಲಾ ಆರೋಪಿ ಮಹೇಶ್​ ಮಾಂಜಿ ಜೊತೆಗೆ ಎರಡನೇ ಮದುವೆ ಆಗಿದ್ದಳು. ಬಿಹಾರ ಮೂಲದ ಕಾರ್ಮಿಕರು ಹಾರೂಗೊಪ್ಪ ಬಳಿ ಇರುವ ಜಿನ್ನಿಂಗ್ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದರು.

ಇವರು ಮಿಲ್ ಸಮೀಪದ ಶೆಡ್​ನಲ್ಲೇ ಇದ್ದರು. ಹೀಗೆ ಇರುವಾಗ ನಿನ್ನೆ ರಂಗೀಲಾ ಜೊತೆಗೆ ಮಹೇಶ್ವರ್​ ಜಗಳ ತೆಗೆದಿದ್ದಾನೆ. ಆ ಬಾಲಕನನ್ನು ನೀನು ಯಾಕೆ ಕರೆದುಕೊಂಡು ಬಂದೆ ಎಂದು ಹಲ್ಲೆ ಮಾಡಲು ಯತ್ನಿಸಿದ್ದಾನೆ” ಎಂದು ತಿಳಿಸಿದರು.


Spread the love

About Laxminews 24x7

Check Also

ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ. ಧರ್ಮಸ್ಥಳದ ಭಕ್ತಾಭಿಮಾನಿಗಳ ವೇದಿಕೆಯಿಂದ ಹೋರಾಟ

Spread the love ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಅಪಪ್ರಚಾರ ವಿಚಾರ ಕುಂದಾನಗರಿ ಬೆಳಗಾವಿಯಲ್ಲಿ ಧರ್ಮಸ್ಥಳ ಭಕ್ತರಿಂದ ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ