ರಾಜ್ಯದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ- ಡಾ.ಜೆ.ಎ.ಹೊಸಮಠ.
ಅರಬ್ಬಿ ಸಮುದ್ರದಲ್ಲಿ ಉಂಟಾದ ಚಂಡ ಮಾರುತದಿಂದ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಧಾರವಾಡ ಕೃಷಿ ಹವಾಮಾನ ಇಲಾಖೆ ಮುಖ್ಯಸ್ಥ ಡಾ.ಜೆ.ಎ.ಹೊಸಮಠ ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾಹಿತಿ ನೀಡಿರುವ ಅವರು, ಕೇಂದ್ರ ಹವಾಮಾನ ಇಲಾಖೆ ಈ ಬಗ್ಗೆ ಆಗಲೇ ಸೂಚನೆ ಕೊಟ್ಟಿದೆ. ಈಗಾಗಲೇ ಬಿರುಸಿನ ಮಳೆ ಆರಂಭವಾಗಿದೆ. ಮೇ.21 ಕ್ಕೆ ಚಂಡ ಮಾರುತ ಬರಲಿದೆ. ಕರಾವಳಿ ಹಾಗೂ ಒಳನಾಡಿನ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಉತ್ತರ ಕರ್ನಾಟಕದಲ್ಲಿ ಮೇ.20 ರಿಂದ 22 ರವರೆಗೆ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ ಇದೆ. ಬೆಂಗಳೂರು ನಗರ, ಗ್ರಾಮೀಣ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೋಲಾರ, ಮೈಸೂರು ಮತ್ತು ವಿಜಯಪುರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಜನ ಮಳೆ ಇದ್ದಾಗ ಹೊರ ಹೋಗದಂತೆ ಎಚ್ಚರಿಕೆ ಸಹ ನೀಡಲಾಗಿದೆ. ಚಂಡ ಮಾರುತದ ಎಫೆಕ್ಟ್ ಹೆಚ್ಚು ಇರುತ್ತದೆ. ಸದ್ಯ ಬರುವ ಅಕಾಲಿಕ ಮಳೆಯ ನೀರು ಸಂಗ್ರಹ ಮಾಡಿದರೆ ಉಪಯೋಗವಾಗುತ್ತದೆ. ಮುಂದೆ ನೀರಿನ ಅಭಾವ ಎದುರಾದಾಗ ಕೃಷಿಗೆ ಇದೇ ನೀರು ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.