Breaking News

SBI ಬ್ಯಾಂಕ್​ನಲ್ಲಿ ‘ಕನ್ನಡ ಮಾತನಾಡುವುದಿಲ್ಲ’ವೆಂದ ಮ್ಯಾನೇಜರ್

Spread the love

ಆನೇಕಲ್​(ಬೆಂಗಳೂರು): ತಾಲೂಕಿನ ಚಂದಾಪುರದ ಸೂರ್ಯನಗರದಲ್ಲಿನ ಎಸ್​ಬಿಐ ಬ್ಯಾಂಕ್​​ ಮ್ಯಾನೇಜರ್​ ಚಳವಳಿಗಾರರೊಬ್ಬರಿಗೆ ಕನ್ನಡ ಮಾತನಾಡುವುದೇ ಇಲ್ಲ ಎಂದು ಪಟ್ಟು ಹಿಡಿದ ವಿಡಿಯೋ ವೈರಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂದಿನಂತೆ ಕನ್ನಡ ಮಾತನಾಡದ ಮಹಿಳಾ ಮ್ಯಾನೇಜರ್​ ಕೇವಲ ಇಂಗ್ಲಿಷ್​​ , ಹಿಂದಿಯಲ್ಲಿಯೇ ಪ್ರತಿಕ್ರಿಯಿಸುತ್ತಿರುವುದನ್ನು ಮೊಬೈಲ್ ಮೂಲಕ ದೃಶ್ಯ ಸೆರೆ ಮಾಡುತ್ತಲೇ, ತಮ್ಮ ಖಾತೆಯಲ್ಲಿ ಹರಿಬಿಟ್ಟ ಸ್ಥಳೀಯ ಮಹೇಶ್ ರೆಡ್ಡಿ ಎಂಬುವರು ‘ಕನ್ನಡ ಮಾತನಾಡಲೇ ಬೇಕು. ಅದು ಆರ್​ಬಿಐ ನಿಯಮ’ ಎಂದು ಪಟ್ಟು ಹಿಡಿದರು.

ಈ ವೇಳೆ ಮ್ಯಾನೇಜರ್​ ಸವಾಲು ಹಾಕುತ್ತಲೇ ‘ಆರ್​ಬಿಐ ನಲ್ಲಿ ಗೈಡ್ಲೈನ್ಸ್ ಎಲ್ಲಿದೆ. ಕನ್ನಡ ಮಾತನಾಡಬೇಕು ಎಂಬ ಮ್ಯಾಂಡೇಟರಿ ಏನಿಲ್ಲ. ನಾನು ಕನ್ನಡ ಮಾತನಾಡುವುದಿಲ್ಲ ‘ ಎಂದು ಅವರೂ ಕೂಡಾ ವಿಡಿಯೋ ಮಾಡಿಕೊಂಡಿದ್ದಾರೆ.

ವಿಡಿಯೋ ವೈರಲಾಗುತ್ತಿದ್ದಂತೆಯೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೇಕಲ್ ಸುತ್ತಲಿನ ಎಲ್ಲ ಖಾಸಗಿ ಬ್ಯಾಂಕ್​ಗಳಲ್ಲಿ ಪರಭಾಷಿಗರೇ ಕಾಣುತ್ತಿದ್ದು, ಸ್ಥಳೀಯರಿಗೆ ಬ್ಯಾಂಕ್​​ ಸೇವೆಗಳ ಸಮಗ್ರ ಮಾಹಿತಿ ದೊರೆಯದೇ ಪರದಾಡುತ್ತಿರುವ, ಬೆನ್ನಲ್ಲೇ ಆಗಾಗ ಇಂತಹ ಘಟನೆಗಳು ಮರುಕಳಿಸುತಿವೆ ಎಂಬ ಕೂಗು ಜೋರಾಗಿದೆ.

ಈ ಹಿಂದೆ ಎಲ್ಲಾ ಬ್ಯಾಂಕ್​​ ಮ್ಯಾನೇಜರ್​ಗಳನ್ನು ಸಭೆ ಕರೆದಿದ್ದ ತಹಶೀಲ್ದಾರ್​​​ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ ಎಂದು ಸೂಚನೆ ನೀಡಿದ್ದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ