Breaking News

ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!

Spread the love

ಬೆಂಗಳೂರು, ಮೇ 16: ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿದವರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ (Lokaykta) ಪೊಲೀಸರು, ಗುರುವಾರ ರಾಜ್ಯಾದ್ಯಂತ ಭರ್ಜರಿ ಬೇಟೆಯಾಗಿದ್ದಾರೆ. ಕರ್ನಾಟಕದ 35 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಾನೂನು ಮಾಪನ ನಿರೀಕ್ಷಕರಾಗಿದ್ದವರು ಹಣದಾಸೆಗೆ ಲಂಚಕ್ಕೆ ಕೈಯೊಡ್ಡಿದ್ದು, ಲೋಕಾ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಗಳು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ, ಮನೆಗಳು, ಭೂಮಿ ಮಾಡಿಕೊಂಡಿರುವುದನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿರುವ ಕಾನೂನು ಮಾಪನ ನಿರೀಕ್ಷ ಹೆಚ್. ಆರ್. ನಟರಾಜ್ ಎಂಬವರ ಮನೆ ಮೇಲೆ ದಾಳಿ ನಡೆದಿದೆ. ನಟರಾಜ್​ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ದಾಳಿಯಾಗಿದ್ದು, ಈ ವೇಳೆ ಬರೊಬ್ಬರಿ 3,94,50,000 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 2 ನಿವೇಶನ, 2 ವಾಸದ ಮನೆ, 9 ಎಕರೆ ಕೃಷಿ ಜಮೀನು ಸೇರಿ ಸ್ಥಿರಾಸ್ತಿ ಒಟ್ಟು ಮೌಲ್ಯ 3 ಕೋಟಿ 13 ಲಕ್ಷ ರೂಪಾಯಿ ಆಗಿದೆ.

ಯೋಜನಾ ನಿರ್ದೇಶಕನ ಬಳಿ 3 ಕೋಟಿ ರೂ.ಗೂ ಹೆಚ್ಚು ಆಸ್ತಿ

ಹೋಸಕೋಟೆಯಲ್ಲೂ ದ್ವಿತೀಯ ದರ್ಜೆ ಸಹಾಯಕ ಅನಂತ ಕುಮಾರ್​ಗೂ ಲೋಕಾಯುಕ್ತ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಅನಂತ ಕುಮಾರ್​​ಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಇತ್ತ ತುಮಕೂರು ಜಿಲ್ಲೆ ಯೋಜನೆ ನಿರ್ದೇಶಕ ರಾಜಶೇಖರ ಡಿ ಅವರಿಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ದಾಳಿ ನಡೆದಿದ್ದು, ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 3,89,50,000 ರೂ. ಎನ್ನಲಾಗಿದೆ. 12 ನಿವೇಶನ , ನಾಲ್ಕು ವಾಸದ ಮನೆಗಳು, ನಾಲ್ಕು ಎಕರೆ ಕೃಷಿ ಜಮೀನು, ನಗದು 11,66,930 ರೂ. ಪತ್ತೆಯಾಗಿದೆ.ಮಂಗಳೂರಿನಲ್ಲಿ ಸರ್ವೆ ಸೂಪರ್​ವೈಸರ್ ಆಗಿದ್ದ ಮಂಜುನಾಥ್ ಭ್ರಷ್ಟತೆಯೂ ಲೋಕಾಯುಕ್ತ ದಾಳಿಯಲ್ಲಿ ಅನಾವರಣಗೊಂಡಿದೆ. ಇನ್ನು ವಿಜಯಪುರದ ಅಂಬೇಡ್ಕರ್ ಅಭಿವೃದ್ಧಿ ನಿಯಮಿತದ ಮಾಜಿ ಜಿಲ್ಲಾ ವ್ಯವಸ್ಥಾಪಕನ ಕೂಡ ಭ್ರಷ್ಟ ಕೂಪವನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ. ರೇಣುಕಾ ಸತಾರ್ಲೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧನ ಕಾರ್ಯ ನಡೆದಿದೆ.ಯಾದಗಿರಿ ಜಿಲ್ಲೆ ಶಹಪುರದ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಭ್ರಷ್ಟಾಚಾರ ಕೂಡ ಬಯಲಿಗೆ ಬಂದಿದೆ.ಉಮಾಕಾಂತ್​​ಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯಿತು. ಉಮಾಕಾಂತ್ ಒಟ್ಟು ಆಸ್ತಿ ಮೌಲ್ಯ 1,98,53,000 ರೂ. ಆಗಿದೆ. 2 ನಿವೇಶನ, 2 ಮನೆ ಸೇರಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 91,18,680 ರೂ. ಆಗಿದೆ.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ