ಬೆಂಗಳೂರು, ಮೇ 15: ಕರ್ನಾಟಕದಾದ್ಯಂತ (Karnataka) ಬೆಳ್ಳಂಬೆಳಗ್ಗೆ ಏಳು ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ (Lokayukta Raids) ಮಾಡಿದೆ. ಆ ಮೂಲಕ ಭಷ್ಟ್ರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರೆದಿದೆ. ಅಕ್ರಮ ಆಸ್ತಿ ಗಳಿಕೆ ದೂರುಗಳು ಬಂದ ಹಿನ್ನೆಲೆ ದಾಳಿ ಮಾಡಿರುವ ಲೋಕಾ, ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ 12 ಕಡೆ ಸೇರಿ ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ ಮಾಡುವ ಮೂಲಕ ಶಾಕ್ ನೀಡಲಾಗಿದೆ.
ಎಲ್ಲೆಲ್ಲಿ ದಾಳಿ?
ಬೆಂಗಳೂರಿನ 12, ತುಕೂರಿನ 7, ಬೆಂಗಳೂರು ಗ್ರಾಮಾಂತರದ 8, ಯಾದಗಿರಿ 5, ಮಂಗಳೂರಿನ 4, ಮತ್ತು ವಿಜಯಪುರದ 4 ಕಡೆ ಲೋಕಾಯುಕ್ತ ದಾಳಿ ಮಾಡಿದೆ.
ಯಾರ ಮೇಲೆ ದಾಳಿ?
- ರಾಜಶೇಖರ್: ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ ತುಮಕೂರು.
- ಮಂಜುನಾಥ್: ಸರ್ವೆ ಸೂಪರ್ವೈಸರ್, ಮಂಗಳೂರು.
- ಶ್ರೀಮತಿ ರೇಣುಕಾ: ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ ವಿಜಯಪುರ.
- ಮುರಳಿ ಟಿವಿ: ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಬೆಂಗಳೂರು.
- ಹೆಚ್ಆರ್ ನಟರಾಜ್: ಇನ್ಸ್ಪೆಕ್ಟರ್, ಕಾನೂನು ಮಾಪನಶಾಸ್ತ್ರ ಬೆಂಗಳೂರು.
- ಅನಂತ್ ಕುಮಾರ್: SDA, ಹೊಸಕೋಟೆ ತಾಲೂಕು ಕಛೇರಿ ಬೆಂಗಳೂರು ಗ್ರಾಮಾಂತರ.
- ಉಮಾಕಾಂತ್: ಶಹಾಪುರ ತಾಲೂಕು ಕಚೇರಿ ಯಾದಗಿರಿ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ: ತಹಶೀಲ್ದಾರ್ ಮನೆ ಮೇಲೆ ದಾಳಿ
ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ ಮನೆಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಇತ್ತ ಯಾದಗಿರಿ ಜಿಲ್ಲೆಯ ಶಹಾಪುರ ತಹಶೀಲ್ದಾರ್ ಕಚೇರಿ ಮೇಲೂ ದಾಳಿ ಮಾಡಲಾಗಿದೆ.
Laxmi News 24×7