ಮಲಿಕವಾಡ ಗ್ರಾಮದಲ್ಲಿ ಮಹಾಲಕ್ಷ್ಮೀ ಮೂರ್ತಿ ಭವ್ಯ ಮೆರವಣಿಗೆ
ಚಿಕ್ಕೋಡಿ: ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಮಹಾಲಕ್ಷ್ಮೀ ಮಂದಿರದ ವಾಸ್ತು ಪೂಜೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದ ಅಂಗವಾಗಿ ಮಹಾಲಕ್ಷ್ಮೀ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಪ್ರಾರಂಭದಲ್ಲಿ ಧೂದಗಂಗಾ ನದಿಗೆ ಪೂಜೆ ಸಲ್ಲಿಸಿದ ಸುಮಂಗಲೆಯರು ನಂತರ ಮೂರ್ತಿಯ ಮತ್ತು ಕುಂಭ ಮೇಳದ ಭವ್ಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ
ಸಂಚರಿಸಿತು. ವಿವಿಧ ವಾಧ್ಯಗಳು ಮತ್ತು ರೂಪಕಗಳು ಮೆರಗು ತಂದವು, ಶಾಸಕ ಗಣೇಶ ಹುಕ್ಕೇರಿಯವರು ಮೂರ್ತಿಯ ಪೂಜೆ ಸಲ್ಲಿಸಿದರು.
ಗ್ರಾಪಂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಗ್ರಾಮಸ್ಥರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮಹಾ ಪ್ರಸಾದ ಕಾರ್ಯಕ್ರಮ ಜರುಗಿತು.
Laxmi News 24×7