ಸವಸುದ್ಧಿ ಗ್ರಾಮಕ್ಕೆ ಸಮರ್ಪಕ ನೀರು ಪೂರೈಸಿ…
ಗ್ರಾ.ಪಂ. ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಮಾಡುವಂತೆ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮ ಪಂಚಾಯಿತಿಯೂ ಆಗ್ರಹಿಸಿದೆ. ರಾಯಬಾಗ ತಾಲೂಕಿನ ಸವಸುದ್ದಿಯ ಗ್ರಾಮದಲ್ಲಿ ಸುಮಾರು 2 ವರ್ಷಗಳಿಂದ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು, ಗ್ರಾಮದಲ್ಲಿರುವ ಎರಡು ದೊಡ್ಡ ಕೆರೆಗಳು ನೀರು ಇಲ್ಲದೆ ಸಂಪೂರ್ಣ ಬತ್ತಿ ಹೋಗಿವೆ. ಇದರಿಂದಾಗಿ ಗ್ರಾಮದಲ್ಲಿರುವ ಎಲ್ಲಾ ಕೊಳವೆ ಭಾವಿಗಳು ಬತ್ತಿ ಹೋಗಿರುತ್ತವೆ. ಅಲ್ಲದೇ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕೂಡಾ ಇರುವುದಿಲ್ಲ.
ಜೆ.ಜೆ.ಎಮ್ ಕಾಮಗಾರಿಗಳು ಅಪೂರ್ಣ ಆಗಿರುತ್ತವೆ. ಆದ ಕಾರಣ ಇದರಿಂದಾಗಿ ಗ್ರಾಮದಲ್ಲಿರುವ ಜನ ಜಾನುವಾರುಗಳಿಗೆ ಕುಡಿಯುವ ಹಾಗೂ ದಿನನಿತ್ಯ ಬಳಕೆಗೆ ನೀರಿನ ತೀವ್ರ ಅಭಾವ ಉಂಟಾಗುತ್ತಿದೆ.
ಜನಸಂಖ್ಯೆ ಹಾಗೂ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿದಿನ ಸುಮಾರು 10 ರಿಂದ 12 ಟ್ರಿಪ್ ಟ್ಯಾಂಕರ ನೀರು ಅವಶ್ಯಕತೆ ಇರುತ್ತದೆ ಅವುಗಳಿಗೆ ಭರಿಸಲು ಗ್ರಾಮ ಪಂಚಾಯತನಲ್ಲಿ ಪ್ರಸ್ತುತ ಅನುದಾನದ ಕೊರತೆಯಿರುತ್ತದೆ. ಟ್ಯಾಂಕರ್’ಗಳ ಮೂಲಕ ನೀರಿನ ಪೂರೈಕೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
Laxmi News 24×7