Breaking News

ಆಸ್ತಿ ತೆರಿಗೆ ಹೆಚ್ಚಳಕ್ಕೆ ಸದ್ದಿಲ್ಲದೆ ತಯಾರಿ

Spread the love

ಬೆಂಗಳೂರು, ಡಿ.- ಆಸ್ತಿ ತೆರಿಗೆ ಹೆಚ್ಚಳಕ್ಕೆ ಸದ್ದಿಲ್ಲದೆ ತಯಾರಿ ನಡೆದಿದೆ. ವಸತಿ ಕಟ್ಟಡಗಳಿಗೆ ಶೇ.25 ಹಾಗೂ ವಸತಿಯೇತರ ಕಟ್ಟಡಗಳಿಗೆ ಶೇ.30ರಷ್ಟು ಆಸ್ತಿ ತೆರಿಗೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಲಯವಾರು ಗೈಡ್‍ಲೈನ್ಸ್ ಆಧಾರದಲ್ಲಿ ಆಸ್ತಿ ತೆರಿಗೆ ವಿಧಿಸುವ ಕುರಿತಂತೆ ಟಿಪ್ಪಣಿ ತಯಾರಿಸಿ ನೀಡುವಂತೆ ಗೌರವ್ ಗುಪ್ತ ಆದೇಶ ನೀಡಿದ್ದು ಜನವರಿಯಿಂದ ಬೆಂಗಳೂರಿನ ನಾಗರಿಕರು ಹೆಚ್ಚುವರಿ ಆಸ್ತಿ ತೆರಿಗೆ ಪಾವತಿಸಬೇಕಾಗುವುದು ಬಹುತೇಕ ಖಚಿತಪಟ್ಟಿದೆ.

ಆರ್ಥಿಕ ಸಂಕಷ್ಟಕ್ಕೀಡಾಗಿರುವ ಬಿಬಿಎಂಪಿಗೆ ಪುನಃಶ್ಚೇತನ ನೀಡುವ ಉದ್ದೇಶದಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ವಿಶೇಷವಾಗಿ ವಿವಿಧ ವಲಯಗಳಲ್ಲಿ ಆಸ್ತಿ ಮೌಲ್ಯದಲ್ಲಿ ಬೆಲೆ ತಾರತಮ್ಯವಿದ್ದು , ಮೌಲ್ಯಕ್ಕೆ ತಕ್ಕಂತೆ ಆಸ್ತಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ನಗರದಲ್ಲಿ ಕೇಂದ್ರ ಭಾಗ, ವಾಣಿಜ್ಯ ಪ್ರದೇಶಗಳು, ವಸತಿಯೋಗ್ಯ ಪ್ರದೇಶ, ಮೂಲ ಸೌಕರ್ಯ ಹಾಗೂ ಹೊರವಲಯದ ಪ್ರದೇಶಗಳು ಎಂದು ವಿಭಾಗಿಸಿ ಎ,ಬಿ,ಸಿ,ಡಿ,ಇ,ಎಫ್ ಎಂಬ ವಲಯಗಳನ್ನು ಗುರುತಿಸಲಾಗಿದೆ. ಈ ವಲಯಗಳ ಗೈಡ್‍ಲೈನ್ಸ್ ವ್ಯಾಲ್ಯೂ ಆಧರಿಸಿ ತೆರಿಗೆ ಹೆಚ್ಚಳ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ