ಬೆಂಗಳೂರು, ಮೇ 06: ವಿಶ್ವಮಾನವ ಎಕ್ಸ್‌ಪ್ರೆಸ್ (Vishwamanava Express) ಪುನರಾರಂಭ ಮತ್ತು ಇತರೆ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಗೆ ಬಗ್ಗೆ ನೈರುತ್ಯ ರೈಲ್ವೆ (SWR) ಮಾಹಿತಿ ನೀಡಿದೆ. ಹಾವೇರಿ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವಿನ ರೈಲ್ವೆ ಹಳಿಯಲ್ಲಿ ಅಗತ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳು ನಡೆಯುತ್ತಿರುವುದರಿಂದ, ಕೆಲ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಹಾಗಾದರೆ ಯಾವೆಲ್ಲಾ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಯಾವೆಲ್ಲಾ ರೈಲುಗಳ ವೇಳಾಪಟ್ಟಿ ಬದಲಾವಣೆ
ಈ ಬಗ್ಗೆ ನೈರುತ್ಯ ರೈಲ್ವೆ ತನ್ನ ಅಧಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಯಾವೆಲ್ಲಾ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
- ರೈಲು ಸಂಖ್ಯೆ 17325: ಬೆಳಗಾವಿ-ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್‌ಪ್ರೆಸ್ ರೈಲು ಈ ಮೊದಲು ಮೇ 5, 6, 8, 9, 11, 12, 13, 15 ಮತ್ತು 16, 2025ರಂದು ಬೆಳಗಾವಿಯಿಂದ 60 ನಿಮಿಷಗಳ ಕಾಳ ತಡವಾಗಿ ಹೊರಡಲಿದೆ. ಮತ್ತು ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಲ್ಲಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಈಗ ಈ ರೈಲು ಮೇ 5, 2025 ರಿಂದ ತನ್ನ ಮೊದಲಿನ ವೇಳಾಪಟ್ಟಿಯ ಪ್ರಕಾರ ಎಂದಿನಂತೆ ಸಂಚಾರ ಆರಂಭಿಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
- ಮೇ 6, 8, 13, 15 ಮತ್ತು 20, 2025 ರಂದು ಬಿಕಾನೇರ್ನಿಂದ ಹೊರಡುವ ರೈಲು ಸಂಖ್ಯೆ 16588 ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸಪ್ರೆಸ್ ರೈಲು ಮಾರ್ಗ ಮಧ್ಯೆ 75 ನಿಮಿಷಗಳ ಕಾಲ ನಿಲ್ಲಿಸಲಾಗುವುದು.ಮೇ 5, 6, 8, 9, 11, 12, 13, 15, 16, 18, 19, 20, 22 ಮತ್ತು 23, 2025 ರಂದು ಹೊರಡುವ ರೈಲು ಸಂಖ್ಯೆ 17347 ಹುಬ್ಬಳ್ಳಿ-ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ 75 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗ ಮಧ್ಯೆ 25 ನಿಮಿಷಗಳ ಕಾಲ ನಿಲ್ಲಿಸಲಾಗುವುದು ಎಂದು ತಿಳಿಸಿದೆ
Laxmi News 24×7