ಬೆಳಗಾವಿ ಹೂವಿನ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಗೆ ವಿರೋಧ…
ಇಲ್ಲದಿದ್ದರೇ ಡಿಸಿ ಕಾರ್ಯಾಲಯದ ಎದುರೇ ವ್ಯಾಪಾರ ಮಾಡುವುದಾಗಿ ಎಚ್ಚರಿಕೆ
ಸರ್ಕಾರದ ನೀತಿಯನ್ನು ಖಂಡಿಸಿದ ವ್ಯಾಪಾರಿಗಳು
ಬೆಳಗಾವಿಯ ಸರ್ಕಾರಿ ಹೂವಿನ ಮಾರುಕಟ್ಟೆಯಲ್ಲಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ವಿರೋಧಿ, ಹರಾಜು ಪ್ರಕ್ರಿಯೆ ಜಾರಿಯಿದ್ದಾಗಲೇ ಈಗಿರುವ ಹೂವಿನ ವ್ಯಾಪಾರಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ಹೊಸ ವ್ಯಾಪಾರಿಗಳಿಗೆ ಅವಕಾಶ ನೀಡಿದರೇ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹೂವಿನ ಮಾರುಕಟ್ಟೆ ಆರಂಭಿಸುವ ಎಚ್ಚರಿಕೆಯನ್ನು ವ್ಯಾಪಾರಿಗಳು ನೀಡಿದ್ದಾರೆ.
ಬೆಳಗಾವಿಯ ಅಶೋಕ ನಗರ ಹತ್ತಿರವಿರುವ ಕರ್ನಾಟಕ ಸರ್ಕಾರ ತೋಟಗಾರಿಕಾ ಇಲಾಖೆಯ ಹೂವಿನ ಮಾರುಕಟ್ಟೆಯಲ್ಲಿ ಇಂದು ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಿತು. ಈ ವೇಳೆ ಪ್ರಸ್ತುತ ವ್ಯಾಪಾರವನ್ನು ಮಾಡುವ ಹೂವಿನ ವ್ಯಾಪಾರಿಗಳು, ಯಾವುದೇ ಕಾರಣಕ್ಕೂ ಬೇರೆಯವರಿಗೆ ಅವಕಾಶ ನೀಡದಂತೆ ಆಗ್ರಹಿಸಿ, ಹರಾಜು ಪ್ರಕ್ರಿಯೆಯನ್ನು ವಿರೋಧಿಸಿದರು.
ಗಾಂಧಿ ನಗರದಲ್ಲಿ ಹೂವಿನ ಮಾರುಕಟ್ಟೆ ನಡೆಸುತ್ತಿದ್ದಾಗ ಸರ್ಕಾರ ನಮ್ಮನ್ನು ಅಲ್ಲಿಂದ ಇಲ್ಲಿಗೆ ಸ್ಥಳಾಂತರಿಸಿತು. ಪ್ರತಿ ತಿಂಗಳು ಪ್ರತಿ ಮಳಿಗೆಗೆ 15 ಸಾವಿರ ಬಾಡಿಗೆಯನ್ನು ಭರಿಸುತ್ತೇವೆ. ಆದರೂ ನಮ್ಮನ್ನು ಕಡೆಗಣಿಸಿ ಬೇರೆಯವರಿಗೆ ಅವಕಾಶ ನೀಡುತ್ತಿದ್ದಾರೆ. ನಮ್ಮನ್ನು ಇದ್ದ ಸ್ಥಳಾಂತರಿಸಿ ಈಗ ಈಗ ಇಲ್ಲಿಂದಲೂ ನಮ್ಮನ್ನು ಹೊರ ಹಾಕಿದರೇ ಬದುಕುವುದು ಹೇಗೆಂದು ಪ್ರಶ್ನಿಸಿದರು.
ಇನ್ನು ಯಾವುದೇ ಕಾರಣಕ್ಕೂ ಹಳಬರನ್ನು ಕಡೆಗಣಿಸಿ, ಹೊಸಬರಿಗೆ ಅವಕಾಶ ನೀಡಬಾರದು. ನಮಗೆ ಈ ವ್ಯಾಪಾರವನ್ನು ಬಿಟ್ಟು ಬೇರೆನು ಗೊತ್ತಿಲ್ಲ. ನಮ್ಮನ್ನು ಇಲ್ಲಿಂದ ಹೊರ ಹಾಕಿದರೇ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟಿಸುವುದಾಗಿ ಎಚ್ಚರಿಕೆಯನ್ನು ನೀಡಿದರು
Laxmi News 24×7