ಬೆಳಗಾವಿ : ವಿಶ್ವ ಪಶು ವೈದ್ಯಕೀಯ ದಿನಾಚರಣೆ..
ಜಾನುವಾರುಗಳ ಉದರ ಸಂಬಂಧಿ ಕಾಯಿಲೆ ಪತ್ತೆ ಮತ್ತು ಚಿಕಿತ್ಸೆ ಕುರಿತು ತಾಂತ್ರಿಕ ಸಮ್ಮೇಳನ..
ಕರ್ನಾಟಕ ಸರ್ಕಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಳಗಾವಿ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಅಂಗವಾಗಿ ಜಾನುವಾರಗಳಲ್ಲಿ ಉದರ ಸಂಬಂಧಿ, ಕಾಯಿಲೆಗಳ ಪತ್ತೆ ಮತ್ತು ಚಿಕಿತ್ಸೆ ಕುರಿತು ಒಂದು ದಿನದ ತಾಂತ್ರಿಕ ಸಮ್ಮೇಳನ ಬೆಳಗಾವಿಯ ಪಶು ಆಸ್ಪತ್ರೆ ಆವರಣದ ರೈತ ಭವನದಲ್ಲಿ ಶನಿವಾರ ನಡೆಯಿತು
ಅಧ್ಯಕ್ಷತೆಯನ್ನು ವಹಿಸಿದ್ದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಎನ್. ಕೂಲೇರ ಮಾತನಾಡಿ, ವಿಶ್ವ ಪಶು ವೈದ್ಯಕೀಯ ದಿನಾಚರಣೆಯನ್ನು ಕಳೆದ 25 ವರ್ಷಗಳಿಂದ ಆಚರಿಸಲಾಗುತ್ತಿದೆ. ಪೌರಾಣಿಕ ಇತಿಹಾಸವನ್ನು ನೋಡಿದಾಗ ನಕುಲ ಸಹದೇವರು ಸಹ ಜಾನುವಾರಗಳ ಚಿಕಿತ್ಸೆ ಪಶುಪಾಲನೆಯಲ್ಲಿ ತೊಡಗಿಕೊಂಡಿದ್ದರು. ಸಾಮ್ರಾಟ ಅಶೋಕನ ಕಾಲದಲ್ಲಿ ಪಶು ವೈದ್ಯಕೀಯ ಶಾಲೆಗಳನ್ನು ತೆಗೆದಿದ್ದನ್ನು ಕಾಣುತ್ತೇವೆ.
1762 ರಲ್ಲಿ ಫ್ರಾನ್ಸ್ ನಲ್ಲಿ ಪ್ರಥಮ ಪಶು ವೈದ್ಯಕೀಯ ಕಾಲೇಜು ಆರಂಭವಾಗಿದೆ. ಭಾರತದಲ್ಲಿ 1800 ರಲ್ಲಿ ಪುಣೆಯಲ್ಲಿ ಮಿಲಿಟರಿ ಪಶು ವೈದ್ಯಕೀಯ ಶಾಲೆಯನ್ನು ಆರಂಭಿಸಲಾಗಿತ್ತು. ಭಾರತದಲ್ಲಿ ಪಂಜಾಬದ ಸಿಂಧ್ ಪ್ರಾಂತ್ಯದಲ್ಲಿ ಪ್ರಥಮ ಪಶು ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪಶು ವೈದ್ಯರಿಗೆ ಸಾಕಷ್ಟು ಮಹತ್ವವಿದೆ. ಪಶು ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ದೇಶದ ವಿಜ್ಞಾನಿಗಳು ಸೇರಿದಂತೆ ವೈದ್ಯರು ಯಾವುದಕ್ಕೂ ಕಡಿಮೆ ಇಲ್ಲ ಹಾಗಾಗಿ ಪಶು ವೈದ್ಯಕೀಯ ದಿನಾಚರಣೆ ಮೂಲಕ ಪಶು ವೈದ್ಯರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು ಡಾ ಮಂಜುನಾಥ್ ಎಸ್ ಪಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಡಾ. ಮಹೇಶ್ ಬಾಬು, ಡಾ ಮಲ್ಲಪ್ಪ ರಾಹುತನವರ,ಡಾ. ವಿಶ್ವನಾಥ್ ಬಂತಿ,ಡಾ. ಹನುಮಂತ ಸಣ್ಣಕ್ಕಿ, ಡಾ. ಶಶಿಧರ ನಾಡಗೌಡ,ಡಾ. ಶ್ರೀಕಾಂತ್ ಕೂವಳ್ಳಿ,ಡಾ. ಮಹಾಲಿಂಗಯ್ಯ ವಿಭೂತಿ ಉಪಸ್ಥಿತರಿದ್ದರು.