Breaking News

ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ “ಫೂಡ್ ಫೆಸ್ಟಿವಲ್”

Spread the love

ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ “ಫೂಡ್ ಫೆಸ್ಟಿವಲ್”

ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ ಫೂಡ್ ಫೆಸ್ಟಿವಲ್’ನ್ನು ಆಯೋಜಿಸಲಾಗಿತ್ತು.
ಈ ಉತ್ಸವದಲ್ಲಿ, ಕಾಲೇಜು ವಿದ್ಯಾರ್ಥಿಗಳು ವಿವಿಧ ರಾಷ್ಟ್ರೀಯ ಮತ್ತು ಸ್ಥಳೀಯ ಖಾದ್ಯಗಳನ್ನೊಳಗೊಂಡ

ಮಳಿಗೆಗಳನ್ನು ನಿರ್ಮಿಸಿ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಆಹಾರವನ್ನು ಮಾರಾಟ ಮಾಡಿದರು. ಅಲ್ಲದೇ ಆ ಆಹಾರದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಅದರಲ್ಲಿ ಮಜ್ಜಿಗೆ, ಸೊಲಕಡಿ, ಘಾವನ್, ಆಲೂ ವಡಿ, ಝೂಣಕಾ ಭಾಕರ್, ದಹಿ ಭಾತ್ , ಮಿಸಲ್, ಕಾಂದಾ ಪೋಹೆ, ದಹಿಪೋಹೆ, ಜಿಗಳಿ, ಕೈರಿ, ಪಾನಿಪುರಿ, ಭೇಲ್, ಪಾವ್ ಭಾಜಿ, ಬೀಟ್ ಪೊಹೆ, ಬೀಟ್ ಸಲಾಡ್, ಸ್ಯಾಂಡ್‌ವಿಚ್‌ಗಳು, ವಡಾ ಪಾವ್, ಕೇಕ್, , ಅಲಿಪಾಕ್, ಬಿಸ್ಕೀಟ್ ಚಾಟ್, ಸಿಹಿತಿಂಡಿಗಳು, ಚಾಟ್, ಪದಾರ್ಥಗಳಿದ್ದವು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಜೆ. ಮೊಳೆರಾಖಿ ಅವರು ಇಂತಹ ಫೂಡ್ ಫೆಸ್ಟಿವಲ್’ಗಳು ವಿದ್ಯಾರ್ಥಿಗಳಿಗೆ ವಿಭಿನ್ನ ಸಂಸ್ಕೃತಿಗಳನ್ನು ಪರಿಚಯಿಸುತ್ತವೆ. ಅಲ್ಲದೇ ಪಾಕಶಾಲೆ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತವೆ ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ