ನವದೆಹಲಿ: 90 ಸಾವಿರ ಕೋಟಿ ರೂ. ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಖರೀದಿಸಲು ಟಾಟಾ ಕಂಪನಿ ಆಸಕ್ತಿ ತೋರಿಸಿದೆ.ʼಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡಿರುವ ಏರ್ ಇಂಡಿಯಾ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಕೇಂದ್ರ ಸರ್ಕಾರ ಬಿಡ್ಡಿಂಗ್ ಆಹ್ವಾನಿಸಿದ್ದು ಇಂದು ಸಂಜೆ 5 ಗಂಟೆಗೆ ಅವಧಿ ಮುಕ್ತಾಯವಾಗಿದೆ.
ಏರ್ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.
ಈ ಬಾರಿ ಬಿಡ್‌ನಲ್ಲಿ ಶೇ.100 ರಷ್ಟು ಷೇರನ್ನು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿ ಖರೀದಿಸಲು ಆಸಕ್ತಿ ತೋರಿಸಿವೆ.
ಮಾಧ್ಯಮಗಳಲ್ಲಿ ಪ್ರಕಟವಾದಂತೆ ಟಾಟಾ ಗ್ರೂಪ್, ಮಲೇಷ್ಯಾದ ಏರ್ ಏಷ್ಯಾ ಗ್ರೂಪ್ ಜೊತೆ ಸೇರಿ ಜಂಟಿಯಾಗಿ ಬಿಡ್‌ನಲ್ಲಿ ಭಾಗವಹಿಸಿದೆ ಎಂದು ವರದಿಯಾಗಿದೆ. ಸದ್ಯ ಏರ್ ಏಷ್ಯಾ ಇಂಡಿಯಾದಲ್ಲಿ ಟಾಟಾ ಗ್ರೂಪ್ ಶೇ.49ರಷ್ಟು ಪಾಲುದಾರಿಕೆ ಹೊಂದಿದೆ. 2020-21ರ ಅಂತ್ಯದ ವೇಳೆಗೆ ಏರ್‌ಏಷ್ಯಾ ಇಂಡಿಯಾದಲ್ಲಿನ ತನ್ನ ಪಾಲನ್ನು ನಿಧಾನವಾಗಿ ಶೇ.76 ಕ್ಕಿಂತ ಹೆಚ್ಚಿಸಲು ಟಾಟಾ ಸಂಸ್ಥೆ ಯೋಚಿಸುತ್ತಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಖರೀದಿಗೆ ಆಸಕ್ತಿ ತೋರಿಸಿದೆ ಎನ್ನಲಾಗುತ್ತಿದೆ.
Laxmi News 24×7