Breaking News

ಎಲ್ಲರ ಚಿತ್ತ ಟೆಸ್ಟ್ ಸರಣಿಯತ್ತ,ಆಸ್ಟ್ರೇಲಿಯಾ ತಂಡವು ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿದೆ.

Spread the love

ಮೆಲ್ಬೋರ್ನ್, ಡಿ.14- ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗಳನ್ನು ಹೈವೋಲ್ಟೇಜ್ ಸರಣಿಯೆಂದೇ ಬಿಂಬಿಸಲಾಗಿದ್ದು ಈಗಾಗಲೇ ಏಕದಿನ ಹಾಗೂ ಚುಟುಕು ಸರಣಿಯಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಜಯಿಸಿರುವುದರಿಂದ ಈಗ ಎಲ್ಲರ ಚಿತ್ತ ಟೆಸ್ಟ್ ಸರಣಿಯತ್ತ ನೆಟ್ಟಿದೆ. ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದ್ದು ಡಿಸೆಂಬರ್ 17 ರಿಂದ ಮೊದಲ ಟೆಸ್ಟ್ ಆರಂಭವಾಗಲಿರುವ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡವು ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿದೆ.

ಆಸೀಸ್ ತಂಡದ ಪ್ರಮುಖ ವೇಗಿ ಆಗಿರುವ ಮಿಚಲ್ ಸ್ಟ್ರಾಕ್ ಅವರು ತಮ್ಮ ಕುಟುಂಬದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ದೂರ ಉಳಿದಿರುವಾಗಲೇ ತಂಡದ ಮತ್ತೊಬ್ಬ ವೇಗಿ ಶೇನ್ ಅಬೋಟ್ ಕೂಡ ಗಾಯಾಳುವಾಗಿರುವುದು ಆಸೀಸ್‍ನ ಬೌಲಿಂಗ್ ಒತ್ತಡ ಹೆಚ್ಚಾಗಿದೆ.

ಗಾಯಾಳುವಾಗಿರುವ ವೇಗಿ ಶೇನ್ ಅಬೋಟ್ ಅವರು ಭಾರತ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಅವರ ಜಾಗದಲ್ಲಿ ಅಲೌಂಡರ್ ಮೊಸಿಸ್ ಹೆನ್‍ಕ್ಯೂರಿಸ್‍ಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ 2ನೆ ಪಂದ್ಯಕ್ಕೆ ಅಬೋಟ್ ಲಭ್ಯರಾಗುವ ಸೂಚನೆಗಳಿವೆ.

ಆಸ್ಟ್ರೇಲಿಯಾ ತಂಡದ ಭರವಸೆ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಭಾರತ ವಿರುದ್ಧದ 2ನೆ ಏಕದಿನ ಪಂದ್ಯದ ವೇಳೆ ಗಾಯಾಳುವಾಗಿದ್ದರಿಂದ ಚುಟುಕು ಸರಣಿಯಿಂದಲೂ ಹೊರಗುಳಿದಿದ್ದರು, ವಾರ್ನರ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದಿರುವುದರಿಂದ ಮೊದಲ ಟೆಸ್ಟ್‍ನಿಂದ ಅವರು ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿದೆ.
ಇನ್ನು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಅಲೌಂಡರ್ ಕ್ಯಾಮೂರುನ್ ಗ್ರೀನ್ ಹಾಗೂ ಪೋಕೋವಾಕ್ಸಿ ಅವರು ಕೂಡ ಮೊದಲ ಟೆಸ್ಟ್‍ನಿಂದ ಹೊರಗುಳಿಯಲಿದ್ದಾರೆ.


Spread the love

About Laxminews 24x7

Check Also

ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ

Spread the love ಮಂಗಳೂರು, ಅಕ್ಟೋಬರ್ 27: ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ