ಬೆಂಗಳೂರು, ಡಿ.14- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ಮುಂದುವರೆಸಿರುವ ನಡುವೆಯೇ ಹಂತ ಹಂತವಾಗಿ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಆರಂಭವಾಗಿವೆ. ಮಧ್ಯಾಹ್ನ 12 ಗಂಟೆ ವೇಳೆಗೆ ರಾಜ್ಯದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಂದ 943 ಬಸ್‍ಗಳ ಸಂಚಾರ ಪ್ರಾರಂಭವಾಗಿತ್ತು ಎಂದು ಸಂಸ್ಥೆಗಳ ಮೂಲಗಳು ತಿಳಿಸಿವೆ.
ಕೆಎಸ್‌ಆರ್‌ಟಿಸಿ 234, ಬಿಎಂಟಿಸಿ 182, ಈಶಾನ್ಯ ಕೆಎಸ್‌ಆರ್‌ಟಿಸಿ 286, ವಾಯುವ್ಯಸಾರಿಗೆ ಸಂಸ್ಥೆಯ 241 ಬಸ್‍ಗಳು ವಿವಿಧ ಸ್ಥಳಗಳಿಂದ ಸಂಚಾರ ಆರಂಭಿಸಿದ್ದವು. ಕೆಎಸ್‌ಆರ್‌ಟಿಸಿಯ ಬಸ್‍ಗಳು ಬೆಂಗಳೂರು ಕೇಂದ್ರ ವಿಭಾಗದಿಂದ 20, ರಾಮನಗರ 11, ತುಮಕೂರು 7, ಕೋಲಾರ 18, ಚಿಕ್ಕಬಳ್ಳಾಪುರ 4, ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 32, ಮೈಸೂರು ಗ್ರಾಮಾಂತರ 12, ಮಂಡ್ಯ 6, ಚಾಮರಾಜನಗರ 19, ಹಾಸನ 11, ಚಿಕ್ಕಮಗಳೂರು 25, ಮಂಗಳೂರು 15, ಪುತ್ತೂರು 28, ದಾವಣಗೆರೆ 5, ಶಿವಮೊಗ್ಗ 18 ಸೇರಿದಂತೆ ಒಟ್ಟು 234 ಬಸ್ ಸಂಚಾರ ಆರಂಭಿಸಿದ್ದವು.
ಅದೇ ರೀತಿ ಬಿಎಂಟಿಸಿ ಬಸ್ ಕೂಡ ಮಧ್ಯಾಹ್ನ 12ವರೆಗೆ 182 ಬಸ್‍ಗಳು ಸಂಚಾರ ಪ್ರಾರಂಭಿಸಿದ್ದವು. ಬೆಳಗ್ಗೆಯಿಂದಲೇ ಹಂತ ಹಂತವಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್‍ಗಳು ರಸ್ತೆಗಿಳಿಯತೊಡಗಿದ್ದವು.
ಮಧ್ಯಾಹ್ನವಾಗುತ್ತಿದ್ದಂತೆ ಬಸ್‍ಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿತು. ಹೀಗಾಗಿ ನೌಕರರ ಮುಷ್ಕರದ ನಡುವೆಯೂ ರಾಜ್ಯಾದ್ಯಂತ ವಿರಳವಾಗಿ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಆರಂಭವಾಗಿತ್ತು