ಮಜಲಟ್ಟಿ ಕ್ರಾಸ್ ಬಳಿ ಭೀಕರ ಅಪಘಾತ.
ಗಾಯಾಳುಗಳ ಸಹಾಯಕ್ಕೆ ಧಾವಿಸಿ ಮಾನವಿಯತೆ ಮೆರೆದ ಎಂಎಲ್‌ಸಿ ನಾಗರಾಜ ಯಾದವ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಕ್ರಾಸ್.
ಟ್ಯಾಂಕರ್ ಹಾಗೂ ಕಾರ್ ನಡುವೆ ಸಂಭವಿಸಿದ ಅಪಘಾತ.
ಕಾರ್‌ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ಬೆಳಗಾವಿಯಿಂದ ಚಿಕ್ಕೋಡಿಯ ಗೊಲ್ಲರ ಸಮಾವೇಶದಲ್ಲಿ ಭಾಗಿಯಾಗಲು ತೆರಳುತ್ತಿದ್ದ ಎಂಎಲ್‌ಸಿ ನಾಗರಾಜ ಯಾದವ್.
ಮಾರ್ಗಮಧ್ಯೆ ಕಂಡ ಅಪಘಾತಕ್ಕೆ ಮಿಡಿದ ಎಂಎಲ್‌ಸಿ ನಾಗರಾಜ ಯಾದವ್.
ಕೂಡಲೇ ಸ್ಥಳೀಯ ನಾಯಕರಿಗೆ ಫೋನ್ ಮಾಡಿ ಆ್ಯಂಬುಲೆನ್ಸ್ ಕಳುಹಿಸುವಂತೆ ಮನವಿ ಮಾಡಿಕೊಂಡ ಎಂಎಲ್‌ಸಿ ನಾಗರಾಜ ಯಾದವ್