ಚಿಕ್ಕೋಡಿಯ ಇಂದಿರಾನಗರದಲ್ಲಿ ನೂತನ ಅಂಬೇಡ್ಕರ್ ಭವನ ಉದ್ಘಾಟಿಸಿದ ಶಾಸಕ ಗಣೇಶ ಹುಕ್ಕೇರಿ
ಚಿಕ್ಕೋಡಿ:ಚಿಕ್ಕೋಡಿ ಪಟ್ಟಣದ ಇಂದಿರಾ ನಗರದಲ್ಲಿ ನೂತನವಾಗಿ ನಿರ್ಮಿಸಿದ ಡಾ.
ಬಿ.ಆರ್. ಅಂಬೇಡ್ಕರ್ ಭವನವನ್ನು ಶಾಸಕ ಗಣೇಶ ಹುಕ್ಕೇರಿ ಉದ್ಘಾಟಿಸಿದರು.
ಈ ಭವನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಗಣೇಶ ಹುಕ್ಕೇರಿ ಪುರಸಭೆ ಸದಸ್ಯ ಸಾಬೀರ ಜಮಾದಾರ ಹಾಗೂ ಪರಿವಾರದವರು ಇಂದಿರಾ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿ ಬದಲಾವಣೆ ತಂದಿದ್ದಾರೆ.. ಅಭಿವೃದ್ಧಿ ವಿಷಯದಲ್ಲಿ ಚಿಕ್ಕೋಡಿ ನಗರದಲ್ಲಿ ಇಂದಿನರಾನಗರ ಹೈ ಟೆಕ್ ವಾಗಿದೆ ಎಂದು ಶ್ಲಾಘಿಸಿದರು.
ಮುಖಂಡರಾದ ಎಂಎಲ್ಸಿ ಪ್ರಕಾಶ ಹುಕ್ಕೇರಿ ಸಹಾಯದಿಂದ ಸಾಬಿರ ಜಮಾದಾರ ಒಳ್ಳೆಯ ಸುಂದರವಾದ ಭವನವನ್ನು ನಿರ್ಮಿಸಿದ್ದಾರೆ. ಈ ಭವನದಲ್ಲಿ ಕಾರ್ಯಕ್ರಮಗಳು ನಡೆಯಲಿಕ್ಕೆ ಕುರುಚಿಗಳು ಸೌಂಡ್ ಸಿಸ್ಟಮ್ ಹಾಗೂ ಇನ್ನಿತರ ಸಲಕರಣೆಗಳು ನೀಡಲಾಗುವುದು ಎಂದರು.
ಚಿಕ್ಕೋಡಿ ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಪೂರೈಕೆಗಾಗಿ 17 ಕೋಟಿ ರೂಪಾಯಿಗಳ ಹೊಸ ಪೈಪ್ಲೈನ್ ಕಾರ್ಯ ನಡೆದಿದೆ. ಚಿಕ್ಕೋಡಿ ನಗರಕ್ಕೆ ಟ್ರಾಮಾ ಕ್ರಿಟಿಕಲ್ ಆಸ್ಪತ್ರೆ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ಆಗಲಿದೆ. 25 ಕೋಟಿ ರೂಪಾಯಿಗಳ ವಿಶೇಷ ಅನುದಾನದಲ್ಲಿ ಚಿಕ್ಕೋಡಿ ನಗರದ ಗುರುವಾರಪೇಟ ರಸ್ತೆಯ ಅಗಲೀಕರಣ ಕಾಮಗಾರಿ ನಡೆಯಲಿದೆ.
ಇಂದಿರಾನಗರದ ಗಣೇಶನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ವಾಯುವಿಹಾರಕ್ಕಾಗಿ ನಗರದ ಜನರು ಬರುತ್ತಾರೆ. ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೇರಾ, ಫೇವರ್ಸ್, ಗಿಡಗಳು ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳಿಗಾಗಿ 20 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದರು.
ಪುರಸಭೆ ಸದಸ್ಯ ರಾಮಾ ಮಾನೆ ಮಾತನಾಡಿ ಸಾಬೀರ ಜಮಾದಾರ ಅವರ ನೇತೃತ್ವದಲ್ಲಿ ಇಂದಿರಾನಗರ ಒಳ್ಳೆಯ ಅಭಿವೃದ್ಧಿಯಾಗಿದೆ. ಮೊದಲು ಚಿಕ್ಕೋಡಿ ನಗರದಲ್ಲಿ ನೀರಿನ ಸಮಸ್ಯೆ ಇತ್ತು,ಪ್ರಕಾಶ ಹುಕ್ಕೇರಿ ಚಿಕ್ಕೋಡಿಯ ಶಾಸಕರಾದ ನಂತರ ನೀರಿನ ವ್ಯವಸ್ಥೆವಾಗಿದೆ. ಯಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಅವರ ಜೊತೆ ಜನರು ಇರಬೇಕು ಎಂದು ಹೇಳಿದರು.
ನ್ಯಾಯವಾದಿ ಸುರೇಶ ಘರಬೂಡೆ ಮಾತನಾಡಿ ಚಿಕ್ಕೋಡಿ ಸದಲಗಸ ಮತಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರು ಮಾಡುವ ಕಾರ್ಯನೋಡಿ, ಸಾಬೀರ್ ಜಮಾದಾರ ಅವರು ಸಹ ಇಂದಿರಾನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಒಂದು ಫೋನ್ ಮಾಡಿದರೆ ಸಾಕು ಜನರ ಸಹಾಯಕ್ಕೆ ಹೋಗುತ್ತಾರೆ. ಇಂತಹ ಪುರಸಭೆ ಸದಸ್ಯ ಸಿಕ್ಕಿದ್ದು ಇಂದಿರಾ ನಗರದ ಜನರ ಭಾಗ್ಯ ಎಂದರು.
ಸಂದರ್ಭದಲ್ಲಿ ಪ್ರೊಫೆಸರ್ ಸುರೇಶ್ ಹುಲ್ಲನ್ನವರ ಮಾತನಾಡಿ ಇಂದಿರಾ ನಗರದಲ್ಲಿ ಭವನ ನಿರ್ಮಾಣ ಮಾಡಬೇಕು ಎಂದು ಅನೇಕ ದಿನಗಳ ಬೇಡಿಕೆ ಇತ್ತು, ಹಾಗಾಗಿ ಪುರಸಭೆ ಸದಸ್ಯ ಸಾಬೀರ ಜಮಾದಾರ ಅವರು ಪ್ರಕಾಶ ಹುಕ್ಕೇರಿ ಹಾಗೂ ಗಣೇಶ.ಹುಕೇರಿಯವರ ಕಡೆಯಿಂದ ಅನುದಾನ ಮಂಜೂರು ಮಾಡಿಸಿ ಭವ್ಯವಾದ ಭವನ ನಿರ್ಮಿಸಿದ್ದಾರೆ. ಹೀಗಾಗಿ ಇಂದಿರಾ ನಗರದ ಜನರ ಅನೇಕ ದಿನಗಳ ಕನಸು ನನಸಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ನೂರಜಹಾನ ಜಮಾದಾರ, ಪುರಸಭೆ ಸದಸ್ಯ ಗುಲಾಬ ಹುಸೇನ್ ಬಾಗವಾನ, ಮುದ್ದಸರ ಜಮಾದಾರ, ಸಿ ಪಿ ಐ ವಿಶ್ವನಾಥ ಚೌಗುಲೆ, ರಾಮಚಂದ್ರ ಶೀಪುರೆ, ರವಿ ದರ್ಜಿ, ಪರಶುರಾಮ ಮಾಳಗೆ, ಶಿನು ಕರಾಳೆ,ಸುಧೀರ ಮಾಯಪ್ಪಗೋಳ, ಜೀವನ ಮಾಂಜರೇಕರ, ಉದಯ ವಾಘಮಾರೆ, ಕಾವೇರಿ ಕಾಂಬಳೆ, ರಾಜಶ್ರೀ ಶಿಂಧೆ, ಶಶಿಕಾಂತ ಜಯಕರ, ಮಂಜುರ ಜಮಾದಾರ,ರಿಯಾ ಜಮಾದಾರ, ರಮೇಶ ಭೋಸಲೆ,
ಅನಿಲ ಭೋಸಲೆ, ಮಹದೇವ್ ಮಾಳಗೆ ಶೇಖರ ಅಸುದೆ,. ಪ್ರಕಾಶ ಮಾನೆ, ವಾಹಿದ ನಾಯಿಕವಾಡಿ,ಸಂಜು ಪೋಳ, ಸುಮಿತ ಖಾಮಕರ, ಗೌತಮ್ ಮಾಂಜರೆಕರ, ಬಂಟಿ ಮಾಳಗೆ, ಶಿತ್ತಲ ಹಸುರೆ, ಸಚಿನ ಇರಬಳೆ,ಅರ್ಬಾಜ ಪೀರಜಾದೆ, ಮನೋಜ ಗಾಡಿವಡ್ಡರ ಸೇರಿದಂತೆ ಸಮಾಜ ಬಾಂಧವರು ಕಾರ್ಯಕರ್ತರು ಉಪಸ್ಥಿತರಿದ್ದರು.